ಆಂಬ್ಯುಲೆನ್ಸ್‌ ಸಾಗಲು ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಕಾರು: ಜನರ ಶ್ಲಾಘನೆ 


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದಾಗ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವಂತೆ ಆದೇಶಿಸಿದರು. ಆಂಬ್ಯುಲೆನ್ಸ್ ಹಾದುಹೋಗುವಾಗ ಪ್ರಧಾನಿಯವರ ಬೆಂಗಾವಲು ಪಡೆ ರಸ್ತೆಯ ಪಕ್ಕದಲ್ಲಿ ನಿಂತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ ಗಾಂಧಿನಗರದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿಗೆ ಲೋಕಾರ್ಪಣೆ ಮಾಡಿ, ಮಧ್ಯಾಹ್ನ ಅಹಮದಾಬಾದ್‌ನ ದೂರದರ್ಶನ ಕೇಂದ್ರದ ಬಳಿ ಸಾರ್ವಜನಿಕ ರ್ಯಾಲಿ ಮುಗಿಸಿ ಅಹಮದಾಬಾದ್-ಗಾಂಧಿನಗರ ಮಾರ್ಗವಾಗಿ ರಾಜಭವನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರಧಾನಿಯವರ ಬೆಂಗಾವಲು ಪಡೆಯ ಭಾಗವಾಗಿದ್ದ ಎರಡು ಎಸ್‌ಯುವಿಗಳು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ರಸ್ತೆಯಲ್ಲಿ ನಿಧಾನವಾಗಿ ಎಡಭಾಗಕ್ಕೆ ಚಲಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋವನ್ನು ಗುಜರಾತ್ ಬಿಜೆಪಿಯು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿದವರು, ಪ್ರಧಾನಿ ಮೋದಿ ಕೇವಲ ಮಾತಿನಲ್ಲಿ ನಾಯಕರಲ್ಲ, ಕೃತಿಯಲ್ಲಿಯೂ ಶ್ರೇಷ್ಠ ಗುಣಗಳಿರುವ ನಾಯಕ ಎಂದು ಮೆಚ್ಚಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!