ರಷ್ಯಾವನ್ನುʼರಕ್ತಪಿಪಾಸುʼ ಎಂದ ವೊಲೋಡಮೀರ್ ಝೆಲೆನ್ಸ್ಕೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ರಷ್ಯಾವನ್ನು “ಭಯೋತ್ಪಾದಕ ರಾಜ್ಯ” ಮತ್ತು “ರಕ್ತಪಿಪಾಸು” ಎಂದು ಕರೆದಿದ್ದಾರೆ. ಉಕ್ರೇನಿಯನ್ ಪ್ರದೇಶದ ಝಪೊರಿಝಿಯಾದಲ್ಲಿ ರಷ್ಯಾದ ವಾಯು ದಾಳಿಯಿಂದ ಕನಿಷ್ಠ 25 ಜನರು ಸಾವನ್ನಪ್ಪಿದ್ದು 50 ಮಂದಿ ಗಾಯಗೊಂಡಿರುವ ಘಟನೆಯ ನಂತರ ಅವರ ಈ ಹೇಳಿಕೆ ಬಂದಿದೆ.

ಈ ತಿಂಗಳಿನಲ್ಲಿ ಅಪಾರ ಪ್ರಮಾಣದಲ್ಲಿ ರಷ್ಯಾ ಸೈನ್ಯಕ್ಕೆ ಹಿನ್ನಡೆಯಾದರೂ ರಷ್ಯಾದ ಅಧ್ಯಕ್ಷ ಪುಟಿನ್‌ ಸೈನ್ಯವನ್ನು ಸಜ್ಜುಗೊಳಿಸುವ ಮತ್ತು ಉಕ್ರೇನ್‌ ಮೇಲಿನ ಆಖ್ರಮಣವನ್ನು ದ್ವಿಗುಣಗೊಳಿಸಲು ಕರೆ ನೀಡಿದ ನಂತರ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ. “ಸಂಪೂರ್ಣ ಭಯೋತ್ಪಾದಕರು ಮಾತ್ರ ಇಂಥಹ ಕೆಲಸ ಮಾಡಬಹುದು. ರಕ್ತಪಿಪಾಸು ರಷ್ಯಾವು ಕಳೆದುಹೋದ ಪ್ರತಿ ಉಕ್ರೇನಿಯನ್ ಜೀವನಕ್ಕೆ ನೀವು ಖಂಡಿತವಾಗಿ ಉತ್ತರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಏತನ್ಮಧ್ಯೆ ಪುಟಿನ್ ತಾನು ವಶಪಡಿಸಿಕೊಂಡಿರುವ 4 ಪ್ರದೇಶಗಳನ್ನು ರಷ್ಯಾದೊಂದಿಗೆ ವಿಲೀಗೊಳಿಸಲು ಮುಂದಾಗಿದ್ದಾರೆ.‌ ಅಲ್ಲದೇ ಅಗತ್ಯ ಬಿದ್ದರೆ ಪರಮಾಣು ದಾಳಿ ಮಾಡಲೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!