ಉಕ್ರೇನ್‌ ನಿಂದ ವಶಪಡಿಸಿಕೊಂಡ 4 ಪ್ರದೇಶಗಳನ್ನು ದೇಶದೊಳಗೆ ವಿಲೀನಗೊಳಿಸಿದ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ಉಕ್ರೇನ್‌ ನಿಂದ ವಶಕ್ಕೆ ಪಡೆದಿದ್ದ ನಾಲ್ಕು ಆಕ್ರಮಿತ ಪ್ರದೇಶಗಳನ್ನು ರಷ್ಯಾ ದೇಶದೊಳಕ್ಕೆ ವಿಲೀನಗೊಳಿಸಿಕೊಂಡಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕೃತವಾಗಿ ಘೋಷಿಸಿದ್ದಾರೆ.  ಉಕ್ರೇನ್‌ ನ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯಗಳಾದ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಪ್ರದೇಶಗಳು ಇನ್ನು ರಷ್ಯಾ ಭಾಗಗಳಾಗಿರಲಿವೆ ಎಂದು ಅವರು ಘೋಷಿಸಿದ್ದಾರೆ.
ಕ್ರೆಮ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ಅವರನ್ನು ರಷ್ಯಾದ “ನಾಲ್ಕು ಹೊಸ ಪ್ರದೇಶಗಳು” ಎಂದು ಬಣ್ಣಿಸಿದರು. ಅಲ್ಲಿನ ಜನರು ಶಾಶ್ವತವಾಗಿ ನಮ್ಮ ನಾಗರಿಕರಾಗುತ್ತಿದ್ದಾರೆ” ಎಂದು  ಹೇಳಿದರು.
ಈ ವೇಳೆ, ಕಳೆ ಏಳು ತಿಂಗಳಿಗಿಂತ ಹೆಚ್ಚು ಅವಧಿಯ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗೆ ಕುಳಿತುಕೊಳ್ಳಲು ಉಕ್ರೇನ್‌ಗೆ ಅವರು ಕರೆ ನೀಡಿದರು. ಆದರೆ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾ ಪ್ರದೇಶಗಳ ನಿಯಂತ್ರಣವನ್ನು ರಷ್ಯಾ ಎಂದಿಗೂ ಒಪ್ಪಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು. ಪಶ್ಚಿಮವು ರಷ್ಯಾಕ್ಕೆ ನೀಡಿದ ಭರವಸೆಗಳನ್ನು ಉಲ್ಲಂಘಿಸಿದೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಅದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಪುಟಿನ್ ಹೇಳಿದರು. ಮತ್ತು ಪಶ್ಚಿಮದ ದೇಶಗಳು “ಯಾವಾಗಲೂ” ಸಾಮ್ರಾಜ್ಯಶಾಹಿಗಳಂತೆ ವರ್ತಿಸುತ್ತಿವೆ ಎಂದು ಅವರು ಕಿಡಿಕಾರಿದರು.
ರಷ್ಯಾ ಮತ್ತು ಇದೇ ಮಾದರಿಯಲ್ಲಿ ಕ್ರಿಮಿಯನ್ ಪರ್ಯಾಯ ದ್ವೀಪವನ್ನು 2014 ರಲ್ಲಿ  ಸ್ವಾಧೀನಪಡಿಸಿಕೊಂಡಿತು.
ರಷ್ಯಾ ಈ ಕ್ರಮದ ಮೂಲಕ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹಲವು ರಾಷ್ಟ್ರಗಳು ಟೀಕಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!