ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ ಸಂಭವಿಸಿದ್ದು, ಹಾಲಿನ ನೊರೆಯಂತೆ ಹಿಮ ಅಪ್ಪಳಿಸಿದ ವಿಡಿಯೋ ವೈರಲ್ ಆಗಿದೆ. ಹಿಮಕುಸಿತದಿಂದ ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ, ಕೇದಾರನಾಥ ಕಣಿವೆಯಲ್ಲಿ ಹೆಚ್ಚಿನ ಹಿಮಪಾತವಾಗಿದೆ.
ಬೆಳಗ್ಗೆ ಇದ್ದಕ್ಕಿದ್ದಂತೆಯೇ ಹಿಮ ಧೊಪ್ಪೆಂದು ಕುಸಿಯಿತು. ದೇವಾಲಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಯಾವ ರೀತಿ ಹಾನಿಯೂ ಆಗಿಲ್ಲ. ವಾರದ ಹಿಂದಷ್ಟೇ ಚೋರಬರಿ ಹಿಮನದಿ ಪ್ರದೇಶದಲ್ಲಿ ಹಿಮಪಾತವಾಗಿತ್ತು. ಆಗಲೂ ಯಾವುದೇ ಹಾನಿ ಆಗಿರಲಿಲ್ಲ ಎಂದು ದೇವಾಲಯದ ಸಿಬ್ಬಂದಿ ಹೇಳಿದ್ದಾರೆ.
#WATCH | Uttarakhand: An avalanche occurred this morning in the Himalayan region but no damage was sustained to the Kedarnath temple: Shri Badrinath-Kedarnath Temple Committee President, Ajendra Ajay pic.twitter.com/fyi2WofTqZ
— ANI UP/Uttarakhand (@ANINewsUP) October 1, 2022