ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 17ರಂದು ಪ್ರಧಾನಿಯವರ ಜನ್ಮದಿನದ ಅಂಗವಾಗಿ ದೇಶದಾಧ್ಯಂತ ಪ್ರಾರಂಭವಾದ ಹದಿನೈದು ದಿನಗಳ ಕಾಲ ನಡೆದ ರಕ್ತದಾನ ಅಭಿಯಾನದಲ್ಲಿ 2.5 ಲಕ್ಷಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದಾರೆ. ಮೊದಲ ದಿನವೇ 1 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ದಾನ ಮಾಡಲಾಗಿದ್ದು ಇದು ದಾಖಲೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಅವರು ದಾನಿಗಳನ್ನು ಶ್ಲಾಘಿಸಿದ್ದಾರೆ. “ನಾವೆಲ್ಲರೂ ಬೇರೆಯವರಿಗಾಗಿ ಯಾವಾಗಲೂ ಇರಲು ಪ್ರತಿಜ್ಞೆ ಮಾಡೋಣ ಮತ್ತು ನಿಯಮಿತವಾಗಿ ರಕ್ತದಾನ ಮಾಡೋಣ” ಎಂದು ಅವರು ಕರೆ ನೀಡಿದ್ದಾರೆ.
ಭಾರತಕ್ಕೆ ಒಂದು ವರ್ಷಕ್ಕೆ ಸುಮಾರು 1.5 ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ದೇಶಾದ್ಯಂತ ಸ್ವಯಂಪ್ರೇರಿತ ರಕ್ತದಾನವನ್ನು ಹೆಚ್ಚಿಸುವ ಗುರಿಯನ್ನು ಈ ಅಭಿಯಾನ ಹೊಂದಿದ್ದು ಆ ಮೂಲಕ ಬದಲಿ ದಾನಿಗಳು ಅಂದರೆ ರೋಗಿಗಳ ಕುಟುಂಬದವರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಅಭಿಯಾನವು ಸಹಾಯ ಮಾಡಲಿದೆ.