ಆಗಸ್ಟ್‌ ನಲ್ಲಿ 23 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ʼವಾಟ್ಸಾಪ್ʼ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ರವಾನೆ ಅಪ್ಲಿಕೇಶನ್ ಆದ ʼವಾಟ್ಸಾಪ್ʼ ತನ್ನ ಅಕ್ಟೋಬರ್ ತಿಂಗಳಿನಲ್ಲಿ ತನ್ನ ‘ಬಳಕೆದಾರ ಸುರಕ್ಷತಾ ವರದಿ’ಯನ್ನು ಬಿಡುಗಡೆ ಮಾಡಿದ್ದು, 23 ಲಕ್ಷ ಭಾರತೀಯ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿರುವುದಾಗಿ ಮಾಹಿತಿ ನೀಡಿದೆ.
ಈ ಮಾಸಿಕ ವರದಿಯನ್ನು 2021 ರ ಐಟಿ ನಿಯಮಗಳ ಅನುಸಾರವಾಗಿ ಬಿಡುಗಡೆ ಮಾಡಲಾಗಿದೆ. ಈ ವರದಿಯು 2022ರ ಆಗಸ್ಟ್ 1 ರಿಂದ 2022 ಆಗಸ್ಟ್ 31 ರವರೆಗಿನ ಅವಧಿಯ ಮಾಹಿತಿಯನ್ನು ಒಳಗೊಂಡಿದೆ.
ಈ ಅವಧಿಯಲ್ಲಿ, ಒಟ್ಟಾರೆಯಾಗಿ 23,28,000 ವಾಟ್ಸಾಪ್ ಖಾತೆಗಳನ್ನು ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ನಿಷೇಧಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಇವುಗಳಲ್ಲಿ, ಬಳಕೆದಾರರಿಂದ ರಿಪೋರ್ಟ್‌ ಆಗದಿದ್ದರೂ 10,08,000 ಅನುಮಾನಾಸ್ಪದ ಖಾತೆಗಳನ್ನು ಪೂರ್ವಭಾವಿ ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ.
ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ‌ ಬಳಕೆದಾರರಿಂದ 598 ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳನ್ನು ಆಧರಿಸಿ ಕಂಪನಿಯು ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು ಪ್ರಕಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!