ಹೊಸದಿಗಂತ ವರದಿ ಸೋಮವಾರಪೇಟೆ:
ನವರಾತ್ರಿಯ ದುರ್ಗಾಮಾತೆ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಭಾರತಾಂಬೆಯಾಗಿ ಕಂಗೊಸಿದ್ದಾಳೆ.
ನವರಾತ್ರಿಯ ಅಂಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯದ ಶಕ್ತಿಪಾರ್ವತಿ ದೇವಿ ಸನ್ನಿಧಿಯಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ನಡೆಯುತ್ತಿದ್ದು, ಭಾನುವಾರ ದೇವಿಗೆ ಭಾರತಾಂಬೆಯ ಅಲಂಕಾರ ಮಾಡಲಾಗಿತ್ತು.
ಅರ್ಚಕ ಚಿತ್ರಕುಮಾರ ಭಟ್ ನೇತೃತ್ವದಲ್ಲಿ ದೇವಿಗೆ ಅರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ನಡೆಯಿತು.