ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸಿನಿಮಾ ಪೊನ್ನಿಯಿನ್ ಸೆಲ್ಚನ್ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದೆ.
ತಮಿಳು, ಕನ್ನಡ,ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಹಿಟ್ ಆಗುತ್ತಿದ್ದು, ನಾಲ್ಕೇ ದಿನಕ್ಕೆ ಬರೋಬ್ಬರಿ 250 ಕೋಟಿ ರೂ. ಹಣ ಬಾಚಿದೆ.
ಮಣಿರತ್ಮಂ ಅವರು ಪ್ರೇಮಕಥೆಯೊಂದನ್ನು ಐತಿಹಾಸಿಕವಾದ ಕಥಾಹಂದರದ ಮೂಲಕ ತೆರೆ ಮೇರೆ ಅದ್ಭುತ ಲೋಕ ಸೃಷ್ಟಿಸಿದ್ದು, ಜನ ಇದನ್ನು ಒಪ್ಪಿದ್ದಾರೆ. ಹೆಚ್ಚು ಮಂದಿ ಸಿನಿಮಾ ನೋಡಿದ್ದು, ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಇನ್ನೂ ದುಡ್ಡು ಮಾಡುತ್ತಿದೆ.