ಶ್ವಾಸಕೋಶದ ಆರೋಗ್ಯ ನಮ್ಮ ದೈನಂದಿನ ಬದುಕಿನ ಗುಣಮಟ್ಟವನ್ನು ನೇರವಾಗಿ ಪ್ರಭಾವಿಸುತ್ತದೆ. ಸಾಮಾನ್ಯವಾಗಿ ಧೂಮಪಾನವೇ ಲಂಗ್ಸ್‌ಗೆ ಹೆಚ್ಚು ಅಪಾಯ ಎಂದು ಎಲ್ಲರೂ ತಿಳಿದಿರಬಹುದು. ಆದರೆ ಇಂದಿನ ಪರಿಸರ, ಜೀವನಶೈಲಿ ಮತ್ತು ಆಹಾರದ ಪದ್ಧತಿಗಳು ಶ್ವಾಸಕೋಶದ ಮೇಲೆ ಇನ್ನಷ್ಟು ಗಂಭೀರ ಪರಿಣಾಮ ಬೀರುತ್ತಿವೆ. ಧೂಮಪಾನ ಮಾಡದವರಿಗೂ ಲಂಗ್ಸ್ ಸಂಬಂಧಿತ ಕಾಯಿಲೆಗಳು ಏಕೆ ಹೆಚ್ಚುತ್ತಿವೆ ಎಂಬ ಪ್ರಶ್ನೆಗೆ ಉತ್ತರ ಈ ಹಾನಿಕಾರಕ ಅಭ್ಯಾಸಗಳಲ್ಲಿ ಅಡಗಿದೆ.
- ದ್ವಿತೀಯ ಧೂಮಪಾನ: ನೀವು ಧೂಮಪಾನ ಮಾಡದಿದ್ದರೂ, ಸಿಗರೇಟ್ ಸೇದುವವರ ಸುತ್ತ ನಿಲ್ಲುವುದರಿಂದ ಹೊಗೆ ನೇರವಾಗಿ ಶ್ವಾಸಕೋಶ ಪ್ರವೇಶಿಸಿ ಹಾನಿ ಮಾಡುತ್ತದೆ.
- ವಾಯು ಮಾಲಿನ್ಯ: ನಗರಗಳಲ್ಲಿನ ಹೆಚ್ಚಿದ ಪಿಪಿಎಂ 2.5 ಮಟ್ಟ ಶ್ವಾಸಕೋಶವನ್ನು ಹಾನಿಗೊಳಿಸಿ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ.
- ಅತಿಯಾದ ಸೋಡಿಯಂ ಇರುವ ಆಹಾರ: ಉಪ್ಪಿನಂಶ ಹೆಚ್ಚಿದ ಆಹಾರಗಳು ಉಸಿರಾಟದ ಸಮಸ್ಯೆ ಹೆಚ್ಚಿಸಿ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತವೆ.
- ಅತಿಯಾದ ಮದ್ಯಪಾನ: ಮದ್ಯಪಾನ ಲಂಗ್ಸ್‌ನ ಪ್ರತಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಉಸಿರಾಟದ ಸೋಂಕುಗಳಿಗೆ ದಾರಿ ಮಾಡುತ್ತದೆ.
- ವಿಷಕಾರಿ ರಾಸಾಯನಿಕಗಳು ಮತ್ತು ಧೂಳು: ನೀರಿನಲ್ಲಿ ಕ್ಲೋರಿನ್, ಡೀಸೆಲ್ ಹೊಗೆ, ಬೆಂಜೀನ್ ರಾಸಾಯನಿಕಗಳು ಹಾಗೂ ಧೂಳಿನ ಕಣಗಳು ಉಸಿರಾಟದ ಮಾರ್ಗವನ್ನು ಹಾನಿಗೊಳಿಸುತ್ತವೆ.
ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಧೂಮಪಾನ ನಿಲ್ಲಿಸುವುದು ಮಾತ್ರ ಸಾಲದು. ಶುದ್ಧ ವಾತಾವರಣ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅವಶ್ಯ. ಲಂಗ್ಸ್ ಆರೋಗ್ಯ ಹಾಳಾಗುವ ಮುನ್ನ ಈ ಅಭ್ಯಾಸಗಳನ್ನು ಬದಲಿಸುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

