ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ದೆಹಲಿ, ಹೈದರಾಬಾದ್ ಮತ್ತು ಪಂಜಾಬ್ನ ಸುಮಾರು ಮೂವತ್ತೈದು ಸ್ಥಳಗಳಲ್ಲಿ ದಾಳಿ ನಡೆಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಈ ಮದ್ಯದ ಹಗರಣಕ್ಕೆ ಸಂಬಂಧಿಸಿದಂತೆ ಇಂಡೋ ಸ್ಪಿರಿಟ್ಸ್ ಎಂಡಿ ಸಮೀರ್ ನೀಡಿದ ಮಾಹಿತಿಯೊಂದಿಗೆ ಇಡಿ ಅಧಿಕಾರಿಗಳು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ನವೆಂಬರ್ 2021 ರಲ್ಲಿ ಹೊರತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿನ ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ನೀತಿಯನ್ನು ಈಗ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Enforcement Directorate (ED) is carrying out searches at nearly three dozen locations in Delhi and Punjab in connection with Delhi Excise Policy case. pic.twitter.com/TfIcX5rx2J
— ANI (@ANI) October 7, 2022