ಸ್ವಾತಂತ್ರ್ಯಕ್ಕಾಗಿ ಆರು ಬಾರಿ ಜೈಲು ಪಾಲಾಗಿದ್ದರು ಚಾರು ಚಂದ್ರ ಮೊಹಂತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚಾರು ಚಂದ್ರ ಮೊಹಂತಿ ಅವರು ಒಡಿಸ್ಸಾದವರು. ಅವರು 1892 ರ ಸೆಪ್ಟೆಂಬರ್ 17 ರಂದು ಪೂರ್ವ ಮಿಡ್ನಾಪುರ ಜಿಲ್ಲೆಯ ಪತಾಸ್‌ಪುರ ಪೊಲೀಸ್ ಠಾಣೆಯ ಪ್ರತಾಪ್ ದಿಘಿ ಗ್ರಾಮದಲ್ಲಿ ಬೈದ್ಯನಾಥ್ ಮೊಹಾಂತಿ ಅವರ ಪುತ್ರನಾಗಿ ಜನಿಸಿದರು. ಆ ಬಳಿಕ ಪಶ್ಚಿಮಮ ಬಂಗಾಳದ ದಂತನ್‌ನ ನಿವಾಸಿಯಾದರು. ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಅವರು ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ದಂತಾನ್‌ನ ಮುನ್‌ಶಿಪ್ ನ್ಯಾಯಾಲಯದಲ್ಲಿ ಅಭ್ಯಾಸ ಮಾಡುವ ವಕೀಲರಾದರು. ಬೀರೇಂದ್ರ ನಾಥ್ ಸಾಸ್ಮಲ್ ಅವರ ಕರೆಗೆ ಓಗೊಟ್ಟು ಅವರು ಯೂನಿಯನ್ ಬೋರ್ಡ್ ಬಹಿಷ್ಕರಿಸುವ ಚಳವಳಿಯಲ್ಲಿ ಸೇರಿಕೊಂಡರು. ಆ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. ದಂತಾನ್, ಮಿಡ್ನಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಪಶ್ಚಿಮ ಬಂಗಾಳದ ಪ್ರಾಂತೀಯ ಕಾಂಗ್ರೆಸ್ ಸಮಿತಿ ಹಾಗೂ ಸ್ಥಳೀಯ ಕಾಂಗ್ರೆಸ್ ಸಮಿತಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಅವರು ಜನರೊಂದಿಗೆ ನಿಂತು ಅವರ ಸಮಸ್ಯೆಗಳನ್ನು ಪರಿಹರಿಸಿದರು. 1921ರಲ್ಲಿ ಅಸಹಕಾರ ಚಳವಳಿಯಿಂದ ಆರಂಭವಾಗಿ 1942ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದವರೆಗೆ ಮೂರು ಹಂತಗಳ ಚಳುವಳಿಯಲ್ಲಿ ಭಾಗವಹಿಸಿ ಆರು ಬಾರಿ ಜೈಲು ಪಾಲಾದರು. 1942 ರಲ್ಲಿ  ಅವರು ಸ್ವತಂತ್ರ್ಯ ಹೋರಾಟದ ಭಾಗವಾಗಿ ದಂತನ್‌ನಲ್ಲಿ ಟೆಲಿಗ್ರಾಫ್ ಮತ್ತು ದೂರವಾಣಿ ಸೇವೆಗಳನ್ನು ಹಾಳುಮಾಡುವಲ್ಲಿ ತೊಡಗಿಸಿಕೊಂಡರು, ಅದಕ್ಕಾಗಿ ಅವರನ್ನು ಬಂಧಿಸಲಾಯಿತು. ಸ್ವಾತಂತ್ರ್ಯದ ನಂತರ, ಅವರು ಎರಡು ಬಾರಿ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು ಮತ್ತು ಎರಡು ಬಾರಿ ಮಂತ್ರಿಯಾದರು. ಅವರು 2 ಏಪ್ರಿಲ್ 1969 ರಂದು ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!