ವಿಶ್ವದ ಅತ್ಯಂತ ಹಗುರವಾದ OLED ಲ್ಯಾಪ್​ಟಾಪ್ ‘ಸ್ವಿಫ್ಟ್ ಎಡ್ಜ್’ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೈವಾನ್‌ನ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಏಸರ್ ಶುಕ್ರವಾರ ‘ಸ್ವಿಫ್ಟ್ ಎಡ್ಜ್’ ಎಂಬ ಹೆಸರಿನ ವಿಶ್ವದ ಅತ್ಯಂತ ಹಗುರವಾದ 16 ಇಂಚಿನ OLED ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಏಸರ್ ಸ್ವಿಫ್ಟ್ ಎಡ್ಜ್ ಇದೇ ತಿಂಗಳಿನಿಂದ ಅಮೆರಿಕ ಮಾರುಕಟ್ಟೆಯಲ್ಲಿ 1,499.99 ಡಾಲರ್​ಗೆ ಲಭ್ಯವಾಗಲಿದೆ. ಉತ್ಪಾದಕತೆ ಮತ್ತು ಸೃಜನಶೀಲತೆಯ ದೃಷ್ಟಿಯಿಂದ ಆಧುನಿಕ ಹೈಬ್ರಿಡ್ ಮಾದರಿಯ ಉದ್ಯೋಗದ ಅಗತ್ಯತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಹೊಸ ಲ್ಯಾಪ್‌ಟಾಪ್ AMD Ryzen PRO 6000 ಸರಣಿ ಮತ್ತು AMD Ryzen 6000 ಸರಣಿ ಪ್ರೊಸೆಸರ್‌ಗಳನ್ನು ಹೊಂದಿದೆ. ಹೆಚ್ಚುತ್ತಿರುವ ಅತ್ಯಾಧುನಿಕ ಸೈಬರ್ ದಾಳಿಗಳ ವಿರುದ್ಧ ರಕ್ಷಣೆ ನೀಡಲು ಮೈಕ್ರೋಸಾಫ್ಟ್ ಪ್ಲುಟಾನ್ ಭದ್ರತಾ ಪ್ರೊಸೆಸರ್ ಅನ್ನು ಒಳಗೊಂಡಿದೆ. ಏಸರ್ ಸ್ವಿಫ್ಟ್ ಎಡ್ಜ್ 4K OLED ಡಿಸ್ ಪ್ಲೇ ಹೊಂದಿದ್ದು,
ಕೇವಲ 1.17 ಕೆಜಿ ತೂಗುತ್ತದೆ ಮತ್ತು 12.95 ಮಿಮೀ ಎತ್ತರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!