ಹೊಸ ದಿಗಂತ ಡಿಜಿಟಲ್ ಡೆಸ್ಕ್
ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ಪರೀಕ್ಷೆ ಮಾಡಬೇಕು ಎಂದು ಕೋರಿ ಹಿಂದು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ವಾರಾಣಸಿ ನ್ಯಾಯಾಲಯವು ಈ ಕುರಿತ ಆದೇಶವನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.
ತಾವು ಆಗ್ರಹಿಸುತ್ತಿರುವುದು ನಿರ್ದಿಷ್ಟವಾಗಿ ಕಾರ್ಬನ್ ಡೇಟಿಂಗ್ ಕ್ರಮಕ್ಕೆ ಅಲ್ಲ, ಬದಲಿಗೆ ಯಾವುದೇ ವಸ್ತುವೊಂದರ ಪ್ರಾಚೀನತೆ ಪತ್ತೆ ಮಾಡಬಹುದಾದ ಸಮಗ್ರ ವೈಜ್ಞಾನಿಕ ಪರೀಕ್ಷೆಗೆ ಎಂದು ಹಿಂದು ಅರ್ಜಿದಾರರು ವಾದಿಸಿದರು.
ಹಿಂದುಗಳ ಈ ಸ್ಪಷ್ಟೀಕರಣಕ್ಕೆ ಉತ್ತರಿಸುವುದಕ್ಕೆ ತಮಗೆ ಸಮಯ ಬೇಕು ಎಂದು ಮುಸ್ಲಿಂ ಪಕ್ಷ ಕೇಳಿಕೊಂಡಿತು.
ಕಾರ್ಬನ್ ಡೇಟಿಂಗ್ ಎಂಬುದು ಯಾವುದೇ ವಸ್ತು ಎಷ್ಟು ಹಳೆಯದ್ದು ಎಂದು ಅಂದಾಜಿಸುವ ವೈಜ್ಞಾನಿಕ ಕ್ರಮವಾಗಿದೆ. ಜ್ಞಾನವಾಪಿಯಲ್ಲಿ ಕೋರ್ಟ್ ಸಮೀಕ್ಷೆ ವೇಳೆ ಪತ್ತೆಯಾಗಿರುವ ಶಿವಲಿಂಗವು ಕೇವಲ ನೀರಿನ ಕಾರಂಜಿ ಎಂದು ಮುಸ್ಲಿಂ ಪಕ್ಷವು ವಾದಿಸಿರುವುದರಿಂದ ಇದೀಗ ವೈಜ್ಞಾನಿಕ ಪರೀಕ್ಷೆಯ ಪ್ರಶ್ನೆ ಉದ್ಭವಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ