ಹೊಸದಿಗಂತ ಡಿಜಿಟ್ ಡೆಸ್ಕ್
ಮೇಷ
ಬದುಕಿನಲ್ಲಿ ಅನಿರೀಕ್ಷಿತ ಬದಲಾವಣೆ ಸಂಭವ. ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ಸಹೋದ್ಯೋಗಿ ಕಿರುಕುಳ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾದೀತು.
ವೃಷಭ
ವೃತ್ತಿಯಲ್ಲಿ ಬಿಡುವಿಲ್ಲದ ಕಾರ್ಯ. ಸಂಘಟಿತವಾಗಿ ಕೆಲಸ ಮಾಡಿ. ಗೊಂದಲಕ್ಕೆ ಆಸ್ಪದ ಕೊಡದಿರಿ. ದೈಹಿಕ ಕ್ಷಮತೆ ಕಾಯಲು ಆದ್ಯತೆ ಕೊಡಿ.
ಮಿಥುನ
ಯೋಜನೆ ಹಾಕಿಕೊಂಡು ಕೆಲಸ ಮಾಡಿ. ಅದರಿಂದ ಸರಿಯಾಗಿ ಕಾರ್ಯ ಮುಗಿಸುವಿರಿ. ಮೆಚ್ಚುಗೆ ಪಡೆಯುವಿರಿ. ಹೆಚ್ಚುತ್ತಿರುವ ಖರ್ಚನ್ನು ಕಡಿಮೆ ಮಾಡಿ.
ಕಟಕ
ಹೊಸ ವ್ಯವಹಾರ ಆರಂಭಿಸಲು ಸಕಾಲ. ನಿಮಗೆ ಪೂರಕ ಪರಿಸ್ಥಿತಿ. ಸಣ್ಣ ಪ್ರವಾಸ ಸಂಭವ. ಆಪ್ತರ ಜತೆಗಿನ ಸಂಬಂಧದಲ್ಲಿ ವೃದ್ಧಿ , ಭಿನ್ನಮತ ದೂರ.
ಸಿಂಹ
ವೃತ್ತಿಯಲ್ಲಿ ಸಂಘರ್ಷ ತಪ್ಪಿಸಿ. ಇತರರ ಪ್ರಚೋದನೆಗೆ ರೇಗದಿರಿ. ತಾಳ್ಮೆ ಕಾಯ್ದುಕೊಳ್ಳಿ. ಅನವಶ್ಯ ಖರ್ಚು ಹೆಚ್ಚಬಹುದು. ಖರೀದಿ ಧಾವಂತ ನಿಯಂತ್ರಿಸಿ.
ಕನ್ಯಾ
ಎಲ್ಲರ ಮೆಚ್ಚುಗೆ ಗಳಿಸುವ ಕಾರ್ಯ ಎಸಗುವಿರಿ. ವಿಘ್ನಗಳು ನಿಮಗೆ ಬಾಧಿಸಲಾರವು. ಕೌಟುಂಬಿಕ ವಿರಸ ಶಮನ, ಎಲ್ಲರ ಜತೆ ಹೊಂದಾಣಿಕೆ.
ತುಲಾ
ಬುದ್ಧಿಮತ್ತೆಯಿಂದ ಕಾರ್ಯವೆಸಗಿ. ಇದರಿಂದ ಮುಂಬರುವ ಅಡ್ಡಿಗಳ ನಿವಾರಣೆ. ಬಂಧುಗಳ ಜತೆ ಸೌಹಾರ್ದದಿಂದ ವ್ಯವಹರಿಸಿರಿ.
ವೃಶ್ಚಿಕ
ಕೆಲಸದ ಹೊರೆ ಅಧಿಕ. ಹೊಸ ಉದ್ಯೋಗದ ಹುಡುಕಾಟ ಫಲ ನೀಡದು. ಆಪ್ತರ ಜತೆ ಸಂವಹನ ಕೊರತೆ, ಭಿನ್ನಮತ ಸಂಭವ. ಆರ್ಥಿಕ ಒತ್ತಡ.
ಧನು
ನಿಮ್ಮ ಕೆಲಸದಲ್ಲಿ ಕೆಲವು ತಪ್ಪು ಘಟಿಸಬಹುದು. ಅದನ್ನು ಕೂಡಲೇ ತಿದ್ದುವ ಪ್ರಯತ್ನ ಮಾಡಿ. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಉಂಟಾದೀತು.
ಮಕರ
ಕಾರ್ಯ ಸಕಾಲದಲ್ಲಿ ಮುಗಿಯದು. ನೂರೆಂಟು ವಿಘ್ನಗಳು. ಮನಸ್ಸಿಗೆ ಕಿರಿಕಿರಿ. ಆಪ್ತರ ಜತೆ ವಿನಯದಿಂದ ವರ್ತಿಸಿ, ಕೋಪತಾಪ ವರ್ಜಿಸಿ.
ಕುಂಭ
ಇಂದು ನಿಮ್ಮ ಕಾರ್ಯ ಮುಗಿಸಲು ಕೆಲವು ವಿಷಯಗಳಲ್ಲಿ ರಾಜಿ ಮಾಡಬೇಕಾಗುತ್ತದೆ. ಯಾರ ಜತೆಗೂ ವಾದಕ್ಕೆ ಇಳಿಯದಿರಿ. ಹೊಂದಾಣಿಕೆ ಮುಖ್ಯ.
ಮೀನ
ಅನಿರೀಕ್ಷಿತ ಧನ ಲಾಭ. ಉದ್ದೇಶಿಸಿದ ಕಾರ್ಯ ಸಫಲತೆ. ಸಂಬಂಧದಲ್ಲಿ ಉಂಟಾಗಿದ್ದ ಕೊಸರು ನಿವಾರಣೆ. ಪರಸ್ಪರ ಹೊಂದಾಣಿಕೆ ಮೂಡುವುದು.