ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರೂಪದ ಹೊಸ ರಕ್ತದ ಗುಂಪೊಂದು ಪತ್ತೆಯಾಗಿದೆ. UK ಯ ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಆ ಹೊಸ ರಕ್ತ ಗುಂಪುನ್ನು ‘ER’ ಎಂದು ಕಂಡುಹಿಡಿದಿದ್ದಾರೆ. ರಕ್ತದಲ್ಲಿನ ಪ್ರೋಟೀನ್‌ಗಳ ಆಧಾರದ ಮೇಲೆ ರಕ್ತದ ಗುಂಪುಗಳನ್ನು ನಿರ್ಧರಿಸಲಾಗುತ್ತದೆ. ಈ ಪ್ರೋಟೀನ್ಗಳು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಕಂಡುಬರುತ್ತವೆ. ಇಲ್ಲಿಯವರೆಗಿನ ಸಾಮಾನ್ಯ ರಕ್ತದ ಗುಂಪುಗಳು A, B, AB ಮತ್ತು O ಹೀಗೆ ಕೇಳಿದ್ವಿ. ಇದೀಗ ಇವುಗಳಿಗೆ ‘ER’ ರಕ್ತದ ಗುಂಪು ಸಹ ಸೇರಿಸಲಾಗಿದೆ. ಸಂಶೋಧಕರು ‘ER’ ರಕ್ತ ಗುಂಪನ್ನು ಕಂಡುಹಿಡಿಯುವ ಮೂಲಕ 30 ವರ್ಷಗಳ ಹಿಂದಿನ ರಹಸ್ಯವನ್ನು ಬಹಿರಂಗಪಸಿದ್ದಾರೆ.
ರಕ್ತದ ಸಮಸ್ಯೆಯಿಂದ ಇಬ್ಬರು ಮಹಿಳೆಯರ ಗರ್ಭದಲ್ಲಿದ್ದ ಶಿಶುಗಳು ಸಾವನ್ನಪ್ಪಿವೆ. ಇದನ್ನು ಅಧ್ಯಯನ ಮಾಡಿದ ವಿಜ್ಞಾನಿಗಳಿಗೆ ಆ ಮಹಿಳೆಯರ ರಕ್ತದ ಗುಂಪು ‘ಇಆರ್’ ಎಂದು ಕಂಡುಬಂದಿದೆ. ದೇಹದಲ್ಲಿ ಒಂದೇ ರಕ್ತದ ಗುಂಪು ಇಲ್ಲದಿದ್ದರೆ, ಗಂಭೀರ ಸಮಸ್ಯೆಗಳು ಅಥವಾ ಸಾವು ಸಂಭವಿಸಬಹುದು ಎಂದಿದ್ದಾರೆ. ತಾಯಿ ಮತ್ತು ಮಗು ವಿಭಿನ್ನ ರಕ್ತ ಗುಂಪುಗಳನ್ನು ಹೊಂದಿರುವಾಗ ತಾಯಿಯ ರೋಗ ನಿರೋಧಕ ಶಕ್ತಿಯು ತೀವ್ರವಾದ ರಿಯಾಕ್ಷನ್‌ಗಳನ್ನು ಉಂಟುಮಾಡುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ತಾಯಿಯ ರಕ್ತದ ಗುಂಪು ‘ER’ ಆಗಿದ್ದರೆ, ಆಕೆಯ ಪ್ರರೋಗ ನಿರೋಧಕ ಶಕ್ತಿ ಮಗುವಿನ ರಕ್ತದ ವಿರುದ್ಧ ಕೆಲಸ ಮಾಡುತ್ತದೆ. ಈ ಪ್ರತಿಕಾಯಗಳು ಜರಾಯುವಿನ ಮೂಲಕ ಮಗುವನ್ನು ತಲುಪಿ ಹೆಮೋಲಿಟಿಕ್ ಕಾಯಿಲೆಗೆ ಕಾರಣವಾಗುತ್ತವೆ. ಹೃದಯಾಘಾತದಿಂದ ಮಗು ಹೊಟ್ಟೆಯಲ್ಲೇ ಸಾವನ್ನಪ್ಪುವ ಹೆಚ್ಚು ಸಾಧ್ಯೆತಗಳಿವೆ ಎಂಬುದು ಕಂಡುಬಂದಿದೆ. ಈ ಸಂಶೋಧನೆಯು ‘ER’ ರಕ್ತದ ಗುಂಪನ್ನು ಪತ್ತೆಹಚ್ಚಲು ಮತ್ತು ಅದರಿಂದ ಉಂಟಾಗುವ ತೊಡಕುಗಳನ್ನು ತಡೆಯಲು ದಾರಿ ಮಾಡಿಕೊಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ‘ಇಆರ್’ ರಕ್ತದ ಗುಂಪನ್ನು ಗುರುತಿಸುವ ಸುಲಭ ವಿಧಾನವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.