ಚಂದ್ರನ ಮೇಲೆ ಹೇರಳವಾದ ಸೋಡಿಯಂ ನಿಕ್ಷೇಪ ಪತ್ತೆಹಚ್ಚಿದ ಚಂದ್ರಯಾನ-2

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚಂದ್ರನ ಮೇಲೆ ಹೇರಳವಾದ ಸೋಡಿಯಂ ನಿಕ್ಷೇಪವಿರುವುದನ್ನು ಇದೇ ಮೊದಲ ಬಾರಿಗೆ ಚಂದ್ರಯಾನ ಯೋಜನೆ ಗುರುತಿಸಿದೆ. ಇದು ಚಂದ್ರನ ಮೇಲಿನ ಸೋಡಿಯಂ ಪ್ರಮಾಣವನ್ನು ಮ್ಯಾಪಿಂಗ್ ಮಾಡುವ ಸಾಧ್ಯತೆಯನ್ನು ತೆರೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ.
‘ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್’ ಎಂಬ ವೈಜ್ಞಾನಿಕ ಕೃತಿಯಲ್ಲಿ ಪ್ರಕಟವಾದ ಇತ್ತೀಚಿನ ಲೇಖನದಲ್ಲಿ, ಚಂದ್ರಯಾನ-2 ʼಕ್ಲಾಸ್ʼ (ಚಂದ್ರಯಾನ-2 ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್) ಅನ್ನು ಬಳಸಿಕೊಂಡು ಚಂದ್ರನ ಮೇಲೆ ಹೇರಳವಾಗಿರುವ ಸೋಡಿಯಂ ನಿಕ್ಷೇಪವನ್ನು ಪತ್ತೆಮಾಡಲಾಗಿದೆ ಎಂದು ಇಸ್ರೋ ಹೆಳಿದೆ. ಈ ಹಿಂದೆ ಚಂದ್ರಯಾನ-1 ಚಂದ್ರನಲ್ಲಿ ಸೋಡಿಯಂ ಅಂಶ ಇರುವುದನ್ನು ಪತ್ತೆಹಚ್ಚಿತ್ತು. ಚಂದ್ರಯಾನ- 2 ನಲ್ಲಿ ಆ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಮುಂದುವರೆಯಿತು ಎಂದು ಹೇಳಿದೆ.
“ಬೆಂಗಳೂರಿನ ಇಸ್ರೋದ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ನಿರ್ಮಿಸಲಾದ ʼಕ್ಲಾಸ್ʼ ಚಂದ್ರನಲ್ಲಿರುವ ಸೋಡಿಯಂ ನಿಕ್ಷೇಪಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲಿದೆ. ಸೋಡಿಯಂ ಇರುವ ಚಂದ್ರನ ಮೇಲ್ಮೈ ಅನ್ನು ಎಕೋಸ್ಪಿಯರ್‌ ಎಂದು ಕರೆಯಲಾಗುತ್ತಿದೆ. ಚಂದ್ರನ ಮೇಲಿರುವ ಸೋಡಿಯಂ ಲಕ್ಷಣಗಳು ಸೋಡಿಯಂ ಪರಮಾಣುಗಳ ತೆಳುವಾದ ಪದರದಿಂದ ಹುಟ್ಟಿಕೊಂಡಿರಬಹುದು ಎಂದು ಅಧ್ಯಯನಗಳು ಹೇಳಿವೆ. ಅದಾಗ್ಯೂ, ಇದು ಚಂದ್ರನ ಕಣಗಳಿಗೆ ದುರ್ಬಲವಾಗಿ ಜೋಡಿಸಲ್ಪಟ್ಟಿದೆ. ಈ ಸೋಡಿಯಂ ಪರಮಾಣುಗಳನ್ನು ಸೌರ ಮಾರುತ ಅಥವಾ ನೇರಳಾತೀತ ವಿಕಿರಣಗಳಿಂದ ಚಂದ್ರನ ಮೇಲ್ಮೈಯಿಂದ ಹೊರಕ್ಕೆ ತಳ್ಳಬಹುದು ಎಂದು ಹೇಳಿಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!