ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯ ಅಪಹರಣ: 15 ದಿನಗಳಲ್ಲಿ ಇದು ನಾಲ್ಕನೇ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಲ್ಲಿ ಹಿಂದೂಗಳನ್ನು ಅಪಹರಿಸಿ ಮತಾಂತರ ಮಾಡುವ ದುಷ್ಕೃತ್ಯ ನಡೆಯುತ್ತಲೇ ಇದೆ. ಹಿಂದೂ ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ. ಇದೀಗ ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಸಿಂಧ್ ಪ್ರಾಂತ್ಯದ ಹೈದರಾಬಾದ್ ಪಟ್ಟಣದ ಚಂದ್ರ ಮೆಹರಾಜ್ ಎಂಬ ಬಾಲಕಿಯನ್ನು ಸ್ಥಳೀಯ ಫತೇ ಚೌಕ್ ಪ್ರದೇಶದಲ್ಲಿ ಅಪಹರಿಸಿರುವುದಾಗಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹೊರಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದೆ.ಕಳೆದ 15 ದಿನಗಳಲ್ಲಿ ಇದು ನಾಲ್ಕನೇ ಘಟನೆಯಾಗಿದೆ. ಇತ್ತೀಚೆಗೆ ಮೂವರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿತ್ತು.

ಕಳೆದ ತಿಂಗಳು 24 ರಂದು ಮೀನಾ ಮೇಘವರ್ ಎಂಬ 14 ವರ್ಷದ ಹಿಂದೂ ಬಾಲಕಿಯನ್ನು ನಜರ್‌ಪುರದಲ್ಲಿ ಅಪಹರಿಸಿ ಮತಾಂತರ ಮಾಡಿ ಬಿಡುಗಡೆ ಮಾಡಿದ್ದರು. ಮನೆಗೆ ಹಿಂತಿರುಗಿ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ರಾಖಿ ಎಂಬ ಮಹಿಳೆಯನ್ನೂ ಕಿಡ್ನಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾಗಿ ಆಕೆಯ ಪತಿ ರವಿಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಹ್ಮದ್ ಎಂಬಾತನ ಜೊತೆ ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸಿದ್ದಾಗಿಯೂ ಆರೋಪಿಸಿದ್ದರು.

ಮತಾಂತರಗೊಳ್ಳಲು ಮತ್ತು ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ಹಿಂದೂ ಹುಡುಗಿಯನ್ನು ಕಳೆದ ಮಾರ್ಚ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರಂತೆ ಪಾಕಿಸ್ತಾನದ ಹಲವೆಡೆ ಹಿಂದೂಗಳು ಹಾಗೂ ಅಲ್ಪಸಂಖ್ಯಾತರನ್ನು ಬಲವಂತವಾಗಿ  ಮತಾಂತರ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!