Tuesday, November 25, 2025

Rice series 35 | ಆಲೂ ಫ್ರೈಡ್ ರೈಸ್: ಸಿಂಪಲ್ ಬ್ರೇಕ್ ಫಾಸ್ಟ್ ರೆಸಿಪಿ

ಫ್ರೈಡ್ ರೈಸ್ ಸಾಕಷ್ಟು ಜನರ ಫೇವರಿಟ್. ಅದಕ್ಕೆ ಆಲೂ ಸೇರಿಸಿದ್ರೆ ಇನ್ನೂ ರುಚಿ, ಕ್ರಂಚಿ, ಫ್ಲೇವರ್ ಡಬಲ್ ಆಗುತ್ತದೆ. ಬೇಗನೆ ತಯಾರಾಗೋ, ಲಂಚ್‍ಬಾಕ್ಸ್‌ಗೆ ಅಥವಾ ಬ್ರೇಕ್ ಫಾಸ್ಟ್ ಗೆ ಸೂಪರ್ ಆಗೋ ಈ ಆಲೂ ಫ್ರೈಡ್ ರೈಸ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವಂತಹ ಡಿಶ್.

ಬೇಕಾಗುವ ಸಾಮಗ್ರಿಗಳು:

ಅನ್ನ – 2 ಕಪ್
ಆಲೂಗೆಡ್ಡೆ – 2
ಈರುಳ್ಳಿ – 1
ಕ್ಯಾರಟ್ – ¼ ಕಪ್
ಕ್ಯಾಪ್ಸಿಕಂ – ½ ಕಪ್
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 tsp
ಸೋಯಾ ಸಾಸ್ – 1 tsp
ಟೊಮಾಟೋ ಸಾಸ್ – 1 tbsp
ಮೆಣಸಿನ ಪುಡಿ – ½ tsp
ಉಪ್ಪು – ರುಚಿಗೆ
ಎಣ್ಣೆ – 2 tbsp
ಕೊತ್ತಂಬರಿ – ಸ್ವಲ್ಪ

ಮಾಡುವ ವಿಧಾನ:

ಆಲೂಗೆಡ್ಡೆಯನ್ನು ಸಣ್ಣಗೆ ಕಟ್ ಮಾಡಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇದರಿಂದ ಫ್ರೈಡ್ ರೈಸ್‌ಗೆ ಸಿಹಿ ಕ್ರಂಚ್ ಬರುತ್ತದೆ.

ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಸ್ವಲ್ಪ ಬಿಸಿ ಮಾಡಿ. ಹಸಿಮೆಣಸು, ಈರುಳ್ಳಿ ಹಾಕಿ ಹುರಿದುಕೊಳ್ಳಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವಷ್ಟು ಬೇಯಿಸಿ. ಈಗ ಕ್ಯಾರಟ್ ಮತ್ತು ಕ್ಯಾಪ್ಸಿಕಂ ಹಾಕಿ 2-3 ನಿಮಿಷ ಹುರಿದುಕೊಳ್ಳಿ. ಈಗ ಸೋಯಾ ಸಾಸ್, ಟೊಮಾಟೋ ಸಾಸ್, ಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಅನ್ನ ಹಾಗೂ ಹುರಿದ ಆಲೂಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಎಲ್ಲಾ ಫ್ಲೇವರ್ ಅಕ್ಕಿಯಲ್ಲಿ ಸೇರುವಂತೆ 2 ನಿಮಿಷ ಹುರಿಯಿರಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಆಲೂ ಫ್ರೈಡ್ ರೈಸ್ ಸಿದ್ಧ!

error: Content is protected !!