ಹೊಸದಿಗಂತ ವರದಿ, ಕಲಬುರಗಿ :
ನಂಬಿಕೆಯನ್ನು ಸಮಾಜದ ಮಧ್ಯೆ ನಿಮಾ೯ಣ ಮಾಡಿ,ಸಾಮಾನ್ಯರಂತೆ ದೇಶದ ಕಾನೂನು ಪಾಲನೆ ಮಾಡುವುದರ ಜೊತೆಗೆ ನಾಯಕನಾದವನು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಜ್ವಲಂತ ಉದಾಹರಣೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ.ತಿಳಿಸಿದರು.
ನಗರದ ಚೆಂಬರ್ ಆಫ್ ಕಾಮಸ್೯,ನ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷ ಕಲಬುರಗಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಮೋದಿ @ 20 ಪುಸ್ತಕ ಬಿಡುಗಡೆ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ನಾಯಕತ್ವಕ್ಕೆ ನಿಜವಾದ ಅಥ೯ ಕೊಟ್ಟವರು ಮೋದಿ ಎಂದರು.
2014ರ ಹಿಂದೆ ಈ ದೇಶದ ಮಹಿಳೆಯರು ರಾಜಕೀಯ ಅಂದರೆ,ಹೊಲಸು ಎಂದು ಭಾವಿಸುತ್ತಿದ್ದರು.ಆದರೆ,ಮೋದಿ ಪ್ರಧಾನಿಯಾದ ಬಳಿಕ ಅವರ ಆಡಳಿತ ವೈಖರಿಯನ್ನು ನೋಡಿ,ಮಹಿಳೆಯರು ಕೂಡ ರಾಜಕೀಯ ಬಗ್ಗೆ ಮಾತನಾಡುತ್ತಾ,ರಾಜಕೀಯ ಚಚೆ೯ ಮಾಡಲು ಆರಂಭಿಸಿದ್ದಾರೆ. ದೇಶದ ಕಾನೂನಿನ ಪರಿಪಾಲನೆ ಯಾವ ರೀತಿ ಮಾಡಬೇಕೆಂಬುದಕ್ಕೆ ಇತ್ತೀಚೆಗೆ ನಡೆದ ಬಹಿರಂಗ ಸಭೆಯೇ ಕಾರಣವೆಂದರು. ತಡರಾತ್ರಿ ಆದ ಕಾರಣ ಸಾವ೯ಜನಿಕ ಸಭೆಯಲ್ಲಿ ಮಾತನಾಡದೇ, ಸಾವ೯ಜನಿಕರ ಮುಂದೆ ಮಂಡಿಯೂರಿ ತಡವಾಗಿದೇ ಎಂದು ಕ್ಷಮೆ ಕೇಳಿದ್ದು ನೆನಪಿಡುವ ಸಂಗತಿ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಕರೆಗೆ ದೇಶದ 4 ಕೋಟಿಗಿಂತ ಹೆಚ್ಚು ಜನರು ಗ್ಯಾಸ್ ಸಬ್ಸಿಡಿಯನ್ನು ತೊರೆದಿದ್ದಾರೆ.ಆದರೆ ಇದೇ ಮಾತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೇಳಿದರೇ,ತೊರೆಯುತ್ತಿದ್ದರೆ ಎಂದು ಪ್ರಶ್ನಿಸಿದರು. ಇಂದು ಭಾರತ ದೇಶದ ಬಹುತೇಕ ಹಳ್ಳಿಗಳಲ್ಲಿ ಒಂದ ಹೊತ್ತಿನ ಉಪವಾಸ ಮಾಡುತ್ತಿರುತ್ತಾರೆ.ಅದಕ್ಕೆ ಕಾರಣ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಎಂದ ಅವರು, ಅವರ ಪ್ರಧಾನ ಮಂತ್ರಿ ಅವಧಿಯಲ್ಲಿ ಆಹಾರ ಭದ್ರತಾ ಸಮಸ್ಯೆ ಉದ್ಬವಿಸಿದಾಗ,ಎಲ್ಲರಿಗೂ ನೀವು ಒಂದ ಹೊತ್ತಿನ ಊಟ ಬಿಟ್ಟರೆ,ಬಡವರು ನಿಮ್ಮ ಒಂದೊತ್ತಿನ ಊಟವನ್ನು ಅವರು ಮಾಡುತ್ತಾರೆ ಎಂದರು.
ಹೇಳಿದಂತೆ ನಡೆದುಕೊಳ್ಳುವ ನಾಯಕರು,ಜನನಾಯಕ ಆಗುತ್ತಾರೆ.ಅವರಂತೆ ನಾವು ನಡೆದುಕೊಂಡರೇ,ಈ ಭಾರತ ವಿಶ್ವದಲ್ಲಿ ಅಗ್ರಸ್ಥಾನವಾಗಿ ಹೊರಹೊಮ್ಮಲಿದೆ. ಕಾನೂನು ಪಾಲನೆ ಒಬ್ಬನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಪಾಲನೆ ಮಾಡಿ ಎಂದು ಹೇಳುತ್ತಾರೆ.ಆದರೆ ಪಾಲನೆ ಮಾಡುವ ಮನಸ್ಥಿತಿಯ ಕೊರತೆಯಿದೆ. ಒಬ್ಬ ನಾಯಕ ,ಒಂದು ರಾಜಕೀಯ ಪಕ್ಷದ ಪ್ರಮುಖ ಹೇಗಿರಬೇಕು ಎಂಬುದನ್ನು ಮೋದಿ ಅವರು ಎಲ್ಲರಿಗೂ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಯ೯ಕ್ರಮದಲ್ಲಿ ಭಾಗವಹಿಸಿದ ಅನೇಕ ಗಣ್ಯರು ಮಾತನಾಡಿದರು. ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ್,ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಖ್ಯಾತ ವೈದ್ಯರು ಮಂಜುನಾಥ ಅಣಕಲ್, ಎಸ್.ರವಿ,ಜೆ ಪಿ.ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು