ಬೈಕ್‌‌ಗೆ ಸಾರಿಗೆ ಬಸ್ ಡಿಕ್ಕಿ; ಹಿಂಬದಿ ಸವಾರ ಸಾವು

ಹೊಸದಿಗಂತ ವರದಿ, ವಿಜಯಪುರ:

ಬೈಕ್‌‌ಗೆ ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿಯಾಗಿ ಬೈಕ್ ಹಿಂಬದಿಯ ಸವಾರಳು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ- ಯಕ್ಕುಂಡಿ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟವಳನ್ನು ಮುತ್ತವ್ವ ಗಸ್ತಿ ಎಂದು ಗುರುತಿಸಲಾಗಿದೆ.

ಈ ಅಪಘಾತದ ಬಳಿಕ ಬಸ್ ಸ್ಥಳದಲ್ಲಿಯೇ ಬಿಟ್ಟು ಕಂಡಕ್ಟರ್, ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!