ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರ್ ಉದ್ಘಾಟನೆ: ಸಾರ್ವಜನಿಕರ ಭೇಟಿಗೆ ಯಾವಾಗ ಸಿಗಲಿದೆ ಅವಕಾಶ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಧ್ಯಪದೇಶದ ಉಜ್ಜಯಿನಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಹಾಕಾಲ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಿದರು.

ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳ ಪೈಕಿ ಉಜ್ಜಯಿನಿಯ ಮಹಾಕಾಲ ದೇವಾಲಯವೂ ಒಂದಾಗಿದೆ.
ಉಜ್ಜಯಿನಿಯ ಮಹಾಕಾಲ ದೇವಾಲಯಕ್ಕೆ ಶಿವನ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಭಕ್ತರು ಇಲ್ಲಿ ನಿರ್ಮಿಸಲಾಗಿರುವ ಮಹಾಕಾಲ ಕಾರಿಡಾರ್ ಮೂಲಕ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ಇಲ್ಲಿ ಏಕಕಾಲಕ್ಕೆ 20,000 ಭಕ್ತರಿಗೆ ಅನುಕೂಲವಾಗುವಂತೆ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

ಈ ಕಾರಿಡಾರ್ ಮೂಲಕ ಹಿಬಾತ್ ದೇವಾಲಯಕ್ಕೆ ಹೋಗಬಹುದು. ಈ ಕಾರಿಡಾರ್ ನಿರ್ಮಾಣದಿಂದ ಉಜ್ಜಯಿನಿ ನಗರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ಟೋಬರ್ 12 ರಿಂದ ಸಾರ್ವಜನಿಕರ ಭೇಟಿಗೆ ಅವಕಾಶ
ಇಂದು ಹೊಸದಾಗಿ ನಿರ್ಮಿಸಲಾದ ಮಹಾಕಾಲ ಲೋಕ (ಕಾರಿಡಾರ್) ಉದ್ಘಾಟನೆ ನಂತರ, ಕಾರಿಡಾರ್ ಅನ್ನು ಅಕ್ಟೋಬರ್ 12 ರಿಂದ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು. ಮಹಾಕಾಲ ಲೋಕವು ಶಿವನ ಬಗ್ಗೆ ಮಾಹಿತಿ ತಿಳಿಯಲು ಇಚ್ಛಿಸುವವರಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ದೇಶ ಮತ್ತು ವಿದೇಶಗಳಿಂದ ಭೇಟಿ ನೀಡುವ ಭಕ್ತರು ಶಿವನ ವಿವಿಧ ಅವತಾರಗಳನ್ನು ಮತ್ತು ಸನಾತನ ಧರ್ಮ (ಸನಾತನ ಧರ್ಮ) ಮತ್ತು ಪುರಾಣಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!