ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಮನೆಯಲ್ಲಿ ಅಭಿಪ್ರಾಯ ಭೇದ ಸಂಭವ. ಸಂಘರ್ಷದ ಪರಿಸ್ಥಿತಿ ದೀರ್ಘಕಾಲ ಉಳಿಸದಿರಿ. ಅದರಿಂದ ನೆಮ್ಮದಿಭಂಗ. ನಿಮ್ಮ ನಡೆನುಡಿಯಲ್ಲಿ ಸಂಯಮವಿರಲಿ.
ವೃಷಭ
ನಿಮ್ಮ ಪ್ರಾಮಾಣಿಕ ಅನಿಸಿಕೆ ಕೆಲವರಿಗೆ ಕಹಿ ಎನಿಸಬಹುದು. ನಿಮ್ಮ ಆಕ್ರೋಶದ ಮೇಲೆ ನಿಯಂತ್ರಣವಿರಲಿ. ಸಂಘರ್ಷಕ್ಕೆ ಆಸ್ಪದ ಕೊಡದಿರಿ.
ಮಿಥುನ
ವೃತ್ತಿಗೆ ಸಂಬಂಧಿಸಿ ನಿರ್ಧಾರ ತಾಳುವಾಗ ಸಾಕಷ್ಟು ಯೋಚಿಸಿ. ಅವಸರದ ತೀರ್ಮಾನ ಬೇಡ. ಖಾಸಗಿ ಬದುಕಲ್ಲಿ ಸಮಸ್ಯೆ. ಏಕಾಂತ ಬಯಸುವಿರಿ.
ಕಟಕ
ಕೌಟುಂಬಿಕ ಸಂಬಂಧ ಸರಿಯಾಗಿ ಇಟ್ಟುಕೊಳ್ಳಿ. ಸಣ್ಣ ವಿಷಯವೂ ಮನಸ್ತಾಪ ಸೃಷ್ಟಿಸಬಹುದು. ತಾಳ್ಮೆ ಮುಖ್ಯ. ಅತಿರೇಕದ ಪ್ರತಿಕ್ರಿಯೆ ಬೇಡ.
ಸಿಂಹ
ಯಾವುದೇ ಕೆಲಸ ಅವಸರದಿಂದ ಮುಗಿಸದಿರಿ. ಅದರಿಂದ ಪ್ರಮಾದವಾದೀತು. ಎಲ್ಲವನ್ನು ಯೋಚಿಸಿ ಮುನ್ನಡೆಯಿರಿ. ಸಹನೆ ಅತಿ ಮುಖ್ಯ.
ಕನ್ಯಾ
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಧಿಸಿ. ಒಂದಕ್ಕೆ ಆದ್ಯತೆ ನೀಡಿ ಮತ್ತೊಂದನ್ನು ಅಲಕ್ಷಿಸದಿರಿ. ಬಂಧುತ್ವ ಉಳಿಸಿಕೊಳ್ಳಿ.
ತುಲಾ
ವೃತ್ತಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಅದರಿಂದ ಮಾನಸಿಕ ಉದ್ವಿಗ್ನತೆ. ಆದರೆ ಸಂಜೆ ವೇಳೆಗೆ ಎಲ್ಲವೂ ನಿರಾಳವಾಗುವುದು. ಕೌಟುಂಬಿಕ ಸಹಕಾರ.
ವೃಶ್ಚಿಕ
ನಿಮ್ಮ ದೈನಂದಿನ ಕಾರ್ಯವ್ಯವಹಾರದಲ್ಲಿ ಬಾರೀ ಬದಲಾವಣೆ ಮಾಡಬೇಡಿ. ಇತರರ ಜತೆ ಹೊಂದಾಣಿಕೆ ಅತಿ ಮುಖ್ಯ. ಆರ್ಥಿಕ ಒತ್ತಡ ಉಂಟಾದೀತು.
ಧನು
ಉದ್ಯೋಗ ಬದಲಾವಣೆಗೆ ಸಕಾಲ. ಅಂತಃಪ್ರೇರಣೆಯಂತೆ ನಡಕೊಳ್ಳಿ. ಅದು ನಿಮಗೆ ಒಳಿತೇ ತರಲಿದೆ. ಇತರರ ಚಾಡಿ ಮಾತು ಕೇಳಲು ಹೋಗದಿರಿ.
ಮಕರ
ವೃತ್ತಿಯಲ್ಲಿನ ಸವಾಲನ್ನು ಸಮರ್ಥವಾಗಿ ನಿಭಾಯಿಸುವಿರಿ. ಆದರೆ ಕೌಟುಂಬಿಕ ಪರಿಸ್ಥಿತಿಯೇ ನಿಮಗೆ ನೈಜ ಸವಾಲೆನಿಸಲಿದೆ. ಸಹನೆ ಕಾಯ್ದುಕೊಳ್ಳಿ.
ಕುಂಭ
ಬಾಕಿ ಉಳಿದಿರುವ ಪ್ರಮುಖ ಕಾರ್ಯ ಇಂದು ಪೂರೈಸುವಿರಿ. ಬಂಧುಗಳ ಜತೆಗಿನ ಸಂಘರ್ಷ ವಿಕೋಪಕ್ಕೆ ಕೊಂಡೊಯ್ಯದಿರಿ. ಸಮಾಧಾನವಿರಲಿ.
ಮೀನ
ಹೊಸ ಯೋಜನೆಯಲ್ಲಿ ಹಣ ಹೂಡುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಏಕೆಂದರೆ ಧನನಷ್ಟ ಸಂಭವಿಸಬಹುದು. ಕೌಟುಂಬಿಕ ಒತ್ತಡ.