ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೊರಿಸ್‌ಗಾಗಿ ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಭಾರತದ ಮೊದಲ ಸ್ಲೆಂಡರ್ ಲೊರಿಸ್ ಅಭಯಾರಣ್ಯ ಸ್ಥಾಪಿಸಲಾಗುತ್ತಿದೆ.
ತಮಿಳುನಾಡು ಸರ್ಕಾರ ಹೆಜ್ಜೆ ಮುಂದಿಟ್ಟಿದ್ದು, ಅಧಿಸೂಚನೆ ಹೊರಡಿಸಿದೆ. ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಒಟ್ಟಾರೆ 11,806 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಅಭಯಾರಣ್ಯ ಸ್ಥಾಪನೆಯಾಗಲಿದೆ.
ಸ್ಪೆಂಡರ್ ಲೊರಿಸ್ ಅಳಿವಿನಂಚಿನಲ್ಲಿದೆ. ಇದನ್ನು ರಕ್ಷಿಸುವುದು ಮುಖ್ಯ ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ. ಪುಟ್ಟಜೀವಿಗಳಾದ ಲೊರಿಸ್‌ಗಳು ಸಸ್ತನಿಗಳಾಗಿವೆ. ಹೆಚ್ಚು ಸಮಯ ಮರದ ಮೇಲೆಯೇ ಕಳೆಯುತ್ತವೆ. ಕೃಷಿ ಭೂಮಿಯ ಕೀಟಗಳು ಇವುಗಳ ಆಹಾರವಾಗಿದೆ.