ಭಾರತದಲ್ಲಿ ಹಣದುಬ್ಬರದ ಕೊರತೆ ಇಲ್ಲ, ರುಪಾಯಿ ಮೌಲ್ಯ ಸ್ಥಿರವಾಗಿದೆ: ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಣದುಬ್ಬರದ ಕೊರತೆ ಇಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಅಮೆರಿಕ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ವಾಷಿಂಗ್ಟನ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಮೆರಿಕದ ಡಾಲರ್ ಮೌಲ್ಯ ಬಲಗೊಂಡರೂ ಭಾರತೀಯ ರೂಪಾಯಿ ಸ್ಥಿರವಾಗಿದ್ದು, ಭಾರತದ ಆರ್ಥಿಕತೆಯ ಬೇರುಗಳು ಬಲಿಷ್ಠವಾಗಿವೆ ಜೊತೆಗೆ ವಿದೇಶಿ ವಿನಿಮಯ ಸಂಗ್ರಹವೂ ಉತ್ತಮವಾಗಿದೆ ಎಂದರು.

ಅಂತರರಾಷ್ಟ್ರೀಯ ಬೆಳವಣಿಗೆಗಳ ಪ್ರಭಾವವು ಕೆಲವು ದೇಶಗಳ ಮೇಲೆ ಅಪಾರವಾಗಿದೆ. ಭಾರತದ ಮೇಲೆ ಪರಿಣಾಮ ಬೀರುತ್ತಿದ್ದರೂ ಸರಿಯಾದ ಸಮಯಕ್ಕೆ ಕೈಗೊಂಡ ಕ್ರಮಗಳಿಂದ ಪರಿಹಾರ ಸಿಗುತ್ತಿದೆ ಎಂದರು. ವಿಶ್ವ ಆರ್ಥಿಕತೆಗೆ ಹೋಲಿಸಿದರೆ ನಮ್ಮ ದೇಶದ ಆರ್ಥಿಕತೆ ಹೇಗಿದೆ ಎಂಬುದನ್ನು ತುಲನೆ ಮಾಡಬೇಕು ಎಂದರು. ವಿತ್ತೀಯ ಕೊರತೆಯಂತಹ ಎಲ್ಲಾ ಅಂಶಗಳತ್ತ ಗಮನಹರಿಸುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನಮ್ಮ ಹಣಕಾಸು ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ದೇಶದ ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಬಳಸಿಕೊಂಡು ಎನ್‌ಡಿಎ ಸರ್ಕಾರ ಬೆದರಿಕೆ ಹಾಕುತ್ತಿದೆ ಎಂಬ ಟೀಕೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಮೂಲ ಸಾಕ್ಷ್ಯಗಳಿಲ್ಲದೆ ಇಡಿ ದಾಳಿ ನಡೆಸುವುದಿಲ್ಲ ಎಂದು ಖಡಕ್‌ ಉತ್ತರ ನೀಡಿದರು. ತಪಾಸಣೆಯಲ್ಲಿ ಸಿಕ್ಕ ಕೆಲವು ಸಾಕ್ಷ್ಯಗಳನ್ನು ಮಾಧ್ಯಮಗಳಲ್ಲಿ ತೋರಿಸಲಾಗುವುದು ಜೊತೆಗೆ ವಶಪಡಿಸಿಕೊಂಡ ನಗದು ಮತ್ತು ಚಿನ್ನದ ವಿವರಗಳನ್ನು ಸಹ ಪರಿಶೀಲಿಸಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!