ಹೊಸದಿಗಂತ ಡಿಜಿಟಲ್ ಡೆಸ್ಕ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ದೊಡ್ಡ ಹೈಪ್ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಮೇಲೆ ಅಭಿಮಾನಿಗಳು ಅಗಾಧ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮಳೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್, ವಿಭಿನ್ನ ಚಿತ್ರಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಹಾಗೂ ಸಲಾರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್ ಸಲಾರ್ ಪೋಸ್ಟರ್ ರಿಲೀಸ್ ಮಾಡಿದೆ.
ಪೃಥ್ವಿರಾಜ್ ಚಿತ್ರದಲ್ಲಿ ʼವರ್ಧರಾಜ ಮನ್ನಾರ್ʼ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಣೆಯ ಮೇಲೆ ತಿಲಕ ಮತ್ತು ಕೆನ್ನೆ, ಹುಬ್ಬುಗಳ ಮೇಲೆ ಗಾಯದ ಗುರುತುಗಳು, ಕುರುಚಲು ಗಡ್ಡ, ಕುತ್ತಿಗೆಯಲ್ಲಿ ಖಡ್ಗ ಧರಿಸಿ ಕೊಳಕಾದ ವಸ್ತ್ರಗಳನ್ನು ಧರಿಸಿ ಯುದ್ಧಭೂಮಿಯಲ್ಲಿ ನಿಂತಂತೆ ತೋರುವ ಪೋಸ್ಟರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
Presenting '𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ from #Salaar.
Parallel or mainstream, Arthouse or commercial, he has always made sure to strike a balance n delivered stupendously with an entertaining n engaging act. To the most versatile @PrithviOfficial a very Happy Birthday. pic.twitter.com/LlCBuc6Tkd
— Hombale Films (@hombalefilms) October 16, 2022
ಸಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಸ್ಟೈಲಿಶ್ ವಿಲನ್ ಆಗಿ ಖ್ಯಾತಿ ಗಳಿಸಿರುವ ಜಗಪತಿ ಬಾಬು ಈ ಚಿತ್ರದಲ್ಲಿ ಪ್ರತಿನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಕೆಜಿಎಫ್ ಗೆ ಕೆಲಸ ಮಾಡಿದ್ಧ ರವಿ ಬಸೂರ್ ಸಂಗೀತ ಮತ್ತು ಛಾಯಾಗ್ರಾಹಕ ಭುವನ್ ಗೌಡ ಅವರು ಚಿತ್ರದಲ್ಲಿ ಮುಂದುವರೆದಿದ್ದಾರೆ.
Thank you #HombaleFilms #PrashanthNeel #Prabhas and the entire team of #Salaar! 😊 #VardharajaMannaar will see you in theatres on the 28th of September 2023!#Salaar #TheEraOfSalaarBegins#Prabhas @prashanth_neel @VKiragandur @hombalefilms pic.twitter.com/fZ8V3BAjfl
— Prithviraj Sukumaran (@PrithviOfficial) October 16, 2022
ಪೋಸ್ಟರ್ ಹಂಚಿಕೊಂಡಿರುವ ಪೃಥ್ವಿರಾಜ್, ಚಿತ್ರದ ಮೊದಲ ನೋಟವನ್ನು ಅನಾವರಣಗೊಳಿಸಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಗೆ ಧನ್ಯವಾದ ತಿಳಿಸಿದ್ದಾರೆ. ಸಲಾರ್ನ ಇಡೀ ತಂಡಕ್ಕೆ ಧನ್ಯವಾದಗಳು! 2023 ರ ಸೆಪ್ಟೆಂಬರ್ 28 ರಂದು ವರ್ಧರಾಜ ಮನ್ನಾರ್ ನಿಮ್ಮನ್ನು ಚಿತ್ರಮಂದಿರಗಳಲ್ಲಿ ಭೇಟಿಯಾಗುತ್ತಾನೆ! ಎಂದು ಬರೆದುಕೊಂಡಿದ್ದಾರೆ.