ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಡ್ರೋನ್ನ್ನು ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.
ಅಮೃತಸರದ ರಾನಿಯಾ ಬಾರ್ಡರ್ ಔಟ್ ಪೋಸ್ಟ್ನಲ್ಲಿ ಭಾನುವಾರ ರಾತ್ರಿ ಡ್ರೋನ್ ಹೊಡೆದುರುಳಿಸಲಾಗಿದೆ. ಈ ಮೂಲಕ ಗಡಿಯೊಳಗೆ ನುಸುಳಲು ಯತ್ನಿಸಿದ ಬಿಎಸ್ಎಫ್ನ 22ನೇ ಬೆಟಾಲಿಯನ್ ವಿಫಲಗೊಳಿಸಿದೆ. ಇದರ ಜತೆಗೆ ಒಟ್ಟಾರೆ 12 ಕೆಜಿ ತೂಕದ ಡ್ರೋನ್ನಲ್ಲಿ ಸರಕು ಕೂಡ ಪತ್ತೆಯಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.