ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಅವರ ಜೊತೆ ಫೋಟೊ ತೆಗೆದುಕೊಳ್ಳೋಕೆ ಯಾವ ಅಭಿಮಾನಿಗೆ ಇಷ್ಟ ಇಲ್ಲ ಹೇಳಿ, ತಮ್ಮ ನೆಚ್ಚಿನ ಕ್ರಿಕೆಟರ್ ಜತೆ ಒಂದು ಫೋಟೊ ಸಿಕ್ಕರೆ ಸಾಕು ಅಂತ ಅಭಿಮಾನಿಗಳು ಕಾಯ್ತಾ ಇರ್ತಾರೆ.
ಇದೇ ರೀತಿ ಕೊಹ್ಲಿ ಜೊತೆ ಫೋಟೊ ತೆಗೆಸಿಕೊಂಡ ಅಭಿಮಾನಿ ಕೂಡ ಫೇಮಸ್ ಆಗಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ನಿರತರಾಗಿರುವ ಕೊಹ್ಲಿ ಅವರನ್ನು ಅಮೀಶಾ ಬಸೇರಾ ಎಂಬ ಅಭಿಮಾನಿ ಭೇಟಿಯಾಗಿ, ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಮೀಶಾ ಸೌಂದರ್ಯಕ್ಕೆ ನೆಟ್ಟಿಗರು ಮಾರುಹೋಗಿದ್ದು, ಇವರು ಹೀರೋಯಿನ್ ಆಗಿರಬೇಕಿತ್ತು ಎನ್ನುತ್ತಿದ್ದಾರೆ.
ಅಮೀಶಾ ಕ್ವೀನ್ಸ್ಲ್ಯಾಂಡ್ ನಿವಾಸಿಯಾಗಿದ್ದು, ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕೊಹ್ಲಿ ಜತೆ ಫೋಟೊ ನಂತರ ಫಾಲೋವರ್ಸ್ ಇದ್ದಕ್ಕಿದ್ದಂತೆಯೇ ಹೆಚ್ಚಾಗಿದ್ದಾರೆ ಎನ್ನುತ್ತಿದ್ದಾರೆ ಅಮೀಶಾ.