IPL 2023 ಮಿನಿ ಹರಾಜಿಗೆ ಡೇಟ್‌ ಫಿಕ್ಸ್: ಈ ಬಾರಿ ಬೆಂಗಳೂರಿನಲ್ಲಿ ಆಟಗಾರರ ಬಿಡ್ಡಿಂಗ್ ವಾರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಐಪಿಎಲ್ 2023ರ ಹರಾಜಿಗೆ ತಯಾರಿ ನಡೆಸುತ್ತಿದೆ. ‌ ಈ ಬಾರಿಯ ಮಿನಿ ಹರಾಜನ್ನು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದು, ಡಿಸೆಂಬರ್ 16 ರಂದು ಒಂದು ದಿನದ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಬಾರಿಯ ಹರಾಜು ಹಲವು ವಿಶೇಷತೆಗಳಿಂದ ಕೂಡಿರಲಿದೆ. ಪ್ರಾಂಚೈಸಿಗಳ ಪರ್ಸ್ ಅನ್ನು 95 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಆದ್ದರಿಂದ ಕೆಲ ಆಟಗಾರರು ಈ ಹಿಂದಿನ ಅತ್ಯಂತ ದುಬಾರಿ ಆಟಗಾರರ ದಾಖಲೆಯನ್ನು ಮುರಿಯಬಹುದು. ಜೊತೆಗೆ ಮುಂಬರುವ ಕಿರು-ಹರಾಜಿನ ಕಾರ್ಯವಿಧಾನವನ್ನು ಪ್ರಾರಂಭಿಸಲು, ನವೆಂಬರ್ 15 ರೊಳಗೆ ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಐಪಿಎಲ್‌ ಆಡಳಿತ ಮಂಡಳಿ ತನ್ನ ಹತ್ತು ಫ್ರಾಂಚೈಸಿಗಳನ್ನು ಕೇಳಿದೆ.
2022ರ ಹರಾಜಿನಲ್ಲಿ, ಪ್ರಾಂಚೈಸಿಗಳ ಪರ್ಸ್ ಅನ್ನು 90 ಕೋಟಿ ರೂ. ಹೆಚ್ಚಿಸಲಾಗಿತ್ತು. ಈ ಬಾರಿ ಮತ್ತೆ 5 ಕೋಟಿ ರೂ. ಹೆಚ್ಚಿಸಲಾಗಿದ್ದು, 95 ಕೋಟಿ ಗೆ ತಲುಪಿದೆ. ಐಪಿಎಲ್ 2024ಕ್ಕೆ ಇದು 100 ಕೋಟಿ ಮುಟ್ಟಲಿದೆ. ಕಳೆದ ಋತುವಿನಲ್ಲಿ ದೊಡ್ಡ ಹರಾಜನ್ನು ಹೊಂದಿದ್ದರಿಂದ ಇದು ಒಂದು ಮಿನಿ ಹರಾಜಾಗಿರುತ್ತದೆ. ಮುಂದಿನ ಮೂರು ಮಿನಿ ಹರಾಜುಗಳಾಗಿರುತ್ತವೆʼ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
IPL 2023 ಟ್ರೇಡ್-ಇನ್ ವಿಂಡೋ:
ಹರಾಜಿನ 7 ದಿನಗಳ ಮುಂಚಿನವರೆಗೆ ಟ್ರೇಡ್ ವಿಂಡೋ ತೆರೆದಿರುತ್ತದೆ. ಈ ವರ್ಷದ ಟ್ರೆಡಿಂಗ್‌ ವಿಭಾಗದಲ್ಲಿ ದೊಡ್ಡ ಹೆಸರಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ರವೀಂದ್ರ ಜಡೇಜಾ ಹೆಸರು ಕೇಳಿಬರುತ್ತಿದೆ. 2012 ರಲ್ಲಿ ಫ್ರಾಂಚೈಸ್‌ ಸೇರಿದ್ದ ಆಲ್‌ರೌಂಡರ್ ಸಿಎಸ್‌ಕೆ ತೊರೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!