ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕೂಟಿ ಮೇಲಿಂದ ಮಹಿಳೆ ಕೆಳಬಿದ್ದಿದ್ದು, ಹಿಂದೆಯೇ ಇದ್ದ ಬಸ್ ಅವರ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಸಂತನಗರ ನಿವಾಸಿ ಉಮಾ ಹಾಗೂ ಅವರ ಮಗಳು ವನಿತಾ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಶ್ರೀನಗರದಿಂದ ಮಾಗಡಿ ರಸ್ತೆ ಮೂಲಕ ಹೋಗುತ್ತಿದ್ದರು. ಈ ವೇಳೆ ದೊಡ್ಡ ಹೊಂಡವೊಂದನ್ನು ತಪ್ಪಿಸಲು ಹೋಗಿ ರಸ್ತೆ ಮೇಲೆ ಇಬ್ಬರೂ ಬಿದ್ದರು. ಹಿಂದೆಯೇ ಬರುತ್ತಿದ್ದ ಬಸ್ ಇಬ್ಬರ ಮೇಲೂ ಹರಿದಿತ್ತು. ಉಮಾ ಅವರ ಕಾಲಿನ ಮೇಲೆ ಬಸ್ ಹರಿದಿದ್ದು, ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಉಮಾ ಮೃತಪಟ್ಟಿದ್ದಾರೆ. ಮಗಳು ವನಿತಾಗೆ ಚಿಕಿತ್ಸೆ ಮುಂದುವರಿದಿದೆ.