ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೊ ಪ್ರಯಾಣವನ್ನು ಇನ್ನಷ್ಟು ಸರಳ, ವೇಗ ಹಾಗೂ ಸಂಪೂರ್ಣ ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಒಎನ್ಡಿಸಿ (ಒಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಜೊತೆಗೂಡಿ ನವಿ ಯುಪಿಐ ಮೆಟ್ರೊ ಕ್ಯೂಆರ್ ಕೋಡ್ ಟಿಕೆಟ್ ಖರೀದಿ ವ್ಯವಸ್ಥೆಯನ್ನು ತನ್ನ ಆಪ್ನಲ್ಲಿ ಪರಿಚಯಿಸಿದೆ. ಇನ್ನು ಬೆಂಗಳೂರು, ದೆಹಲಿ, ಮುಂಬೈನ ಮೆಟ್ರೊ ಪ್ರಯಾಣಿಕರು ನವಿ ಯುಪಿಐ ಆಪ್ನಲ್ಲೂ ಮೆಟ್ರೊ ಟಿಕೆಟ್ ಖರೀದಿಸಬಹುದಾಗಿದೆ. ಸದ್ಯದಲ್ಲೇ ಈ ಸೌಲಭ್ಯ ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿ ನಗರಗಳಲ್ಲೂ ಲಭ್ಯವಾಗಲಿದೆ.
ಈ ನೂತನ ವ್ಯವಸ್ಥೆ ಮೂಲಕ ನವಿ ಯುಪಿಐ ಗ್ರಾಹಕರು ತ್ವರಿತ ಪಾವತಿ ಸೌಲಭ್ಯದ ಜೊತೆ ಸಿಂಗಲ್ ಅಥವಾ ರಿಟರ್ನ್ ಪ್ರಯಾಣದ ಮೆಟ್ರೊ ಕ್ಯೂಆರ್ ಟಿಕೆಟ್ನ್ನು ಆಪ್ನಲ್ಲಿ ಬುಕ್ ಮಾಡಬಹುದಾಗಿದೆ. ಈ ವ್ಯವಸ್ಥೆಯು ಪ್ರಯಾಣಿಕರಿಗೆ ಸರತಿ ಸಾಲಿನಲ್ಲಿ ಕಾಯುವ, ಬಹುಆಪ್ಗಳನ್ನು ಬಳಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುವುದಲ್ಲದೇ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ನೀಡುತ್ತದೆ.
ಒಎನ್ಡಿಸಿ ಜೊತೆಗಿನ ಪಾಲುದಾರಿಕೆ ಕುರಿತು ಮಾತನಾಡಿದ ನವಿ ಲಿಮಿಟೆಡ್ ( ಈ ಮೊದಲು ನವಿ ಟೆಕ್ನಾಲಜೀಸ್ ಲಿಮಿಟೆಡ್)ನ ಎಮ್ಡಿ ಮತ್ತು ಸಿಇಒ ರಾಜೀವ್ ನರೇಶ್ “ ಭಾರತದ ಮೆಟ್ರೊ ಪ್ರತಿದಿನ ಕೋಟ್ಯಾಂತರ ಜನರಿಗೆ ಸಾರಿಗೆ ವ್ಯವಸ್ಥೆಯನ್ನು ನೀಡುತ್ತದೆ. ಆದರೂ ದೊಡ್ಡ ಪ್ರಮಾಣದ ಪ್ರಯಾಣಿಕರು ಇನ್ನೂ ಹಣ ಪಾವತಿಸುವ ಮತ್ತು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆಯನ್ನು ಹೊಂದಿದ್ದಾರೆ. ನವಿ ಯಲ್ಲಿ ನಾವು ನಿತ್ಯದ ಪಾವತಿಗಳು ಯಾರನ್ನೂ ನಿಧಾನವಾಗಿಸಬಾರದು ಎಂದು ನಂಬುತ್ತೇವೆ. ಒಎನ್ಡಿಸಿ ಜೊತೆಗೂಡಿ ನಾವು ಒನ್ ಆಪ್- ಒನ್ ಕ್ಯೂಆರ್ ಟಿಕೆಟ್- ನವಿ ಯುಪಿಐ ಆಪ್ ಮೇಲೆ ಒಂದು ಟ್ಯಾಪ್ ವ್ಯವಸ್ಥೆ ಮೂಲಕ ಮೆಟ್ರೊ ಪ್ರಯಾಣವನ್ನು ಡಿಜಿಟಲ್ ವ್ಯವಸ್ಥೆಯಾಗಿ ಬದಲಾಯಿಸಿದ್ದೇವೆ. ನಿತ್ಯದ ಪ್ರತಿ ಪ್ರಯಾಣಿಕರಿಗೂ ಅವರ ಸಂಚಾರ ಸುಲಭ ಮತ್ತು ವೇಗವಾಗಿರಬೇಕು” ಎಂದರು.
ಒಎನ್ಡಿಸಿ ಯ ಹಿರಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಿತಿನ್ ನಾಯರ್ ಮಾತನಾಡಿ “ ನವಿ ಜೊತೆಗಿನ ಒಪ್ಪಂದವು ಹೇಗೆ ಓಪನ್ ನೆಟ್ವರ್ಕ್ವ್ಯವಸ್ಥೆ ಭಾರತದ ಡಿಜಿಟಲ್ ಪಯಣವನ್ನು ಬದಲಾಯಿಸುತ್ತದೆ ಎಂಬುದನ್ನು ತೋರಿಸುತ್ತದೆ. ಒಂದು ತಂತ್ರಜ್ಞಾನ ಏಕೀಕರಣವು ಒಂದೇ ಆಪ್ನಲ್ಲಿ ತ್ವರಿತವಾಗಿ, ಸುಲಭವಾಗಿ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ನೀಡುತ್ತಿದೆ. ಇದೇ ರೀತಿ ಓಪನ್ ಇಕೊಸಿಸ್ಟೆಮ್ ನಾವೀನ್ಯತೆಯಿಂದ ಪರಿಣಾಮಕಾರಿಯಾಗಿ ಸಾಗುತ್ತದೆ. ನಿತ್ಯದ ಸೇವೆ ಸೌಲಭ್ಯವನ್ನು ಬಳಕೆದಾರರ ಸ್ನೇಹಿಯಾಗಿ ಮತ್ತು ಸರಳವಾಗಿಸುತ್ತದೆ” ಎಂದರು.
ಸದ್ಯ ಈ ಮೆಟ್ರೊ ಟಿಕೆಟ್ ಸೌಲಭ್ಯವು ದೆಹಲಿ ಮೆಟ್ರೊ, ಮುಂಬೈ ಮೆಟ್ರೊ (ಲೈನ್ 1, 2A, 7 ಮತ್ತು 3) ಹಾಗೂ ಬೆಂಗಳೂರು ಮೆಟ್ರೋಗೆ ಲಭ್ಯವಿದೆ.

