ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಇಷ್ಟೇ ವರ್ಷ ಆಗಿರಬೇಕು ಅಂತ ಟೈಮ್ ಫಿಕ್ಸ್ ಇಲ್ಲ. ಯಾವಾಗ ಸಿಎಂ ಬದಲಿಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಇಂತಿಷ್ಟೇ ವರ್ಷ ಸಿಎಂ ಆಗಿರಬೇಕು ಅಂತಿಲ್ಲ. ಟೈಮ್ ಫಿಕ್ಸ್ ಇಲ್ಲ. ಯಾವಾಗ ಸಿಎಂ ಬದಲಿಸಬೇಕೆಂದು ವರಿಷ್ಠರು ನಿರ್ಧರಿಸುತ್ತಾರೆ ಎಂದರು.
ಸದ್ಯ ರಾಜ್ಯದಲ್ಲಿ ಸಿಎಂ ಬದಲಾವಣೆಯ ಯಾವುದೇ ಸಂದರ್ಭ ಇಲ್ಲ. ಸಿಎಂ ಬದಲಾಯಿಸುತ್ತೇವೆ ಎಂದು ಹೈಕಮಾಂಡ್ ಹೇಳಿದ್ಯಾ? ಸಿಎಂ ಬದಲಾವಣೆ ಚರ್ಚೆ ಇಲ್ಲ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಹೇಳಿದ್ದಾರೆ ಎಂದರು.

