ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೋಪಿಯಾನ್ನಲ್ಲಿ ಗ್ರೆನೇಡ್ ಸ್ಫೋಟ ನಡೆಸಿ ಇಬ್ಬರು ವಲಸೆ ಕಾರ್ಮಿಕರ ಸಾವಿಗೆ ಕಾರಣವಾದ ಲಷ್ಕರ್ ಎ ತೊಯ್ಬಾದ ‘ಹೈಬ್ರೀಡ್’ ಭಯೋತ್ಪಾದಕ, ಭದ್ರತಾ ಪಡೆಗಳಿಂದ ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಇನ್ನೊಬ್ಬ ಭಯೋತ್ಪಾದಕ ನಡೆಸಿದ ಗುಂಡಿನ ದಾಳಿಯಲ್ಲಿ ಹತನಾಗಿದ್ದಾನೆ.
ಗ್ರೆನೇಡ್ ಸ್ಫೋಟದಲ್ಲಿ ಉತ್ತರ ಪ್ರದೇಶ ವಲಸೆ ಕಾರ್ಮಿಕರಾದ ರಾಮ್ ಸಾಗರ್ ಮತ್ತು ಮುನೇಶ್ ಕುಮಾರ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಹೈಬ್ರಿಡ್ ಭಯೋತ್ಪಾದಕ ಇಮ್ರಾನ್ ಬಷೀರ್ ಗನೈ ಬಂಧಿಸಲಾಗಿತ್ತು. ಈ ವೇಳೆ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಬಂಧಿತ ಉಗ್ರ ಮತ್ತೋರ್ವ ಭಯೋತ್ಪಾದಕ ಹಾರಿಸಿದ ಗುಂಡಿಗೆ ಹತನಾದನು ಎಂದು ಕಾಶ್ಮೀರ ವಲಯ ಪೊಲೀಸ್ ಟ್ವೀಟ್ ಮಾಡಿದೆ.