ದಿನಭವಿಷ್ಯ | ನಿಮ್ಮ ಕನಸು ನನಸಾಗಿಸುವ ದಿನವನ್ನು ವ್ಯರ್ಥಗೊಳಿಸದಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ

ಅಧಿಕ ಕೆಲಸ, ಅಧಿಕ ಕಿರುಕುಳ. ಇದು ಇಂದಿನ ನಿಮ್ಮ ಫಲ. ಯಾವುದೇ ಕೆಲಸವೂ ನಿರೀಕ್ಷಿತ ಫಲ ನೀಡುವುದಿಲ್ಲ. ಹಾಗಾಗಿ ಪ್ರಮುಖ ಕಾರ್ಯ ಮಾಡದಿರಿ.

ವೃಷಭ
ಆರ್ಥಿಕ ಸಮಸ್ಯೆ ನೀಗಲಿದೆ. ಬಾಕಿಯಿರುವ ಕೆಲವು ಕೆಲಸಗಳನ್ನು ಇಂದು ಪೂರೈಸಲು ಯತ್ನಿಸಿ. ಇಲ್ಲದಿದ್ದರೆ ಅದುವೇ ಹೊರೆಯಾದೀತು.

ಮಿಥುನ
ಕಾರ್ಯವೊಂದನ್ನು ಮಾಡಬೇಕೆ , ಬೇಡವೆ ಎಂಬ ಸಂದಿಗ್ಧತೆ ಇಂದು ನಿಮ್ಮನ್ನು ಕಾಡಲಿದೆ. ಯಾವುದೇ ನಿರ್ಧಾರ ತಾಳಿದರೂ ವಿವಾದವು ನಿಮ್ಮನ್ನು ಬೆಂಬಿಡದು.

ಕಟಕ
ನಿಮ್ಮ ಕನಸು ನನಸಾಗಿಸುವ ಅವಕಾಶ ಬರುವುದು. ಅದನ್ನು ವ್ಯರ್ಥಗೊಳಿಸದಿರಿ. ಕೆಲವರ ಕುರಿತಾದ ನಿಮ್ಮ ಅಪನಂಬಿಕೆ ಇಂದು ತೊಲಗುವುದು.

ಸಿಂಹ
ಕೆಲವರ ಕುರಿತಾದ ಪೂರ್ವಗ್ರಹ ಒಳ್ಳೆಯ ದಲ್ಲ. ಅವರತ್ತ ಅಸಹನೆ ತೋರದಿರಿ. ನಿಜ ವಿಷಯ ತಿಳಿಯಲು ಪ್ರಯತ್ನಿಸಿ. ಸೌಹಾರ್ದತೆ ಒಳ್ಳೆಯದು.

ಕನ್ಯಾ
ಸಂತೋಷದ ದಿನ. ಉದ್ಯಮದಲ್ಲಿ ಯಶಸ್ಸು. ವೈವಾಹಿಕ ಸಂಬಂಧದ ಪ್ರಯತ್ನಗಳು ಯಶ ಕಾಣುತ್ತವೆ. ವಿದ್ಯಾರ್ಥಿಗಳಿಗೆ ಯಶ.

ತುಲಾ
ಭಾವನಾತ್ಮಕವಾಗಿ ಏರುಪೇರಿನ ದಿನ. ನಿಮ್ಮ ಅಹವಾಲು ಫಲ ಕಾಣಲಾರದು. ಸಂಬಂಧಿಸಿದವರು ಸೂಕ್ತವಾಗಿ ಸ್ಪಂದಿಸುವುದಿಲ್ಲ.

ವೃಶ್ಚಿಕ
ಕುಟುಂಬಸ್ಥರಿಂದ ಅಥವಾ ಸ್ನೇಹಿತರಿಂದ ಕೊಡುಗೆ ಪಡೆಯುವ ಸಂಭವ. ಎಲ್ಲರೊಡನೆ ಬೆರೆಯುವುದರಿಂದ ಕುಶಿ. ಆಪ್ತರಿಂದ ಮೆಚ್ಚುಗೆ ಪಡೆಯುವಿರಿ.

ಧನು
ಆರೋಗ್ಯ ಸಮಸ್ಯೆ ಕಾಡಬಹುದು. ವಿಶ್ರಾಂತಿಯ ಅಗತ್ಯ ಬಿದ್ದೀತು. ಕೌಟುಂಬಿಕ ಗುರಿ ಈಡೇರಲಿದೆ. ಎಲ್ಲರಿಂದ ಮನ್ನಣೆ. ಆರ್ಥಿಕ ಉನ್ನತಿ.

ಮಕರ
ಹಣಕಾಸು ವಿಷಯಗಳಲ್ಲಿ ಹೆಚ್ಚು ವ್ಯಸ್ತರಾಗುವಿರಿ . ಆರ್ಥಿಕ ಬಿಕ್ಕಟ್ಟು ಕಾಡಬಹುದು. ಕೌಟುಂಬಿಕ ಬಜೆಟ್ ಹೊಂದಾಣಿಸಬೇಕು.

ಕುಂಭ
ಭಾವನಾತ್ಮಕವಾಗಿ ಏಕಾಂಗಿತನ ಅನುಭವಿಸುವಿರಿ. ಯಾವುದೋ ನೋವು, ಯಾರದೋ ನಿರಾಕರಣೆ ನಿಮ್ಮನ್ನು ಕಾಡುತ್ತದೆ. ಕೌಟುಂಬಿಕ ಒತ್ತಡ.

ಮೀನ
ಮನೆಯಲ್ಲಿ ಸಂಘರ್ಷ, ವಾದ ನಡೆಯಬಹುದು. ಆದರೆ ಅದನ್ನು ಸಮಾಧಾನದಿಂದ ಪರಿಹರಿಸುವಲ್ಲಿ ಸಫಲರಾಗುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!