ಹೊಸದಿಗಂತ ಡಿಜಿಟಲ್ ಡೆಸ್ಕ್
ಆರ್.ಸುಗುತನ್ ಅವರು 23 ಡಿಸೆಂಬರ್ 1901 ರಂದು ಕೇರಳದ ಅಲಪ್ಪುಳ ಜಿಲ್ಲೆಯ ಅಲ್ಲಿಸ್ಸೆರಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸುಗತನ್ ಅವರು ತಮ್ಮ ಭಾಷಣ ಮತ್ತು ಲೇಖನಗಳ ಮೂಲಕ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ವಿರುದ್ಧ ಪ್ರತಿಭಟಿಸುತ್ತಿದ್ದರು.
19387 ರ ಸೆಪ್ಟೆಂಬರ್ 7 ರಂದು ಅವರನ್ನು ಆಲಪ್ಪುಳದಲ್ಲಿ ಬಂಧಿಸಲಾಯಿತು ಮತ್ತು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಪಿಕೆಟಿಂಗ್ ಮಾಡಿದ್ದಕ್ಕಾಗಿ ರೂ.1000 ದಂಡವನ್ನು ವಿಧಿಸಲಾಯಿತು. ಅವರಿಗೆ ಒಂದೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. 1 ಜೂನ್ 1941 ರಂದು, ಬ್ರಿಟಿಷರನ್ನು ಟೀಕಿಸುವ ಕವಿತೆಯನ್ನು ಬರೆದು ಪ್ರಕಟಿಸಿದ್ದಕ್ಕಾಗಿ ಅವರು 3 ವರ್ಷಗಳ ಕಾಲ ಸೆರೆವಾಸ ಅನುಭವಿಸಿದರು. ಸಿಪಿಯ ಅಮೇರಿಕನ್ ಮಾದರಿ ಸಂವಿಧಾನದ ವಿರುದ್ಧದ ಆಂದೋಲನದಲ್ಲಿ ಭಾಗವಹಿಸಿದ ಕಾರಣ 1946 ರಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಅವರು 14 ಫೆಬ್ರವರಿ 1970 ರಂದು ನಿಧನರಾದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ