ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಇಂಗ್ಲಿಷರ ವಿರುದ್ಧ ಕಾದಾಡಿದ್ದರು ನರಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನರಸಿಂಗ ನಾಯಕ್ ಅವರು 1924 ರಲ್ಲಿ ‌ಒರಿಸ್ಸಾದ ಗಂಜಾಂ ಜಿಲ್ಲೆಯ ಬೆಳಗುಂತಾ ಗ್ರಾಮದಲ್ಲಿ ಆನಂದ್ ನಾಯಕ್ ಮತ್ತು ಮುಕ್ತಾ ನಾಯಕ್ ದಂಪತಿಯ ಪುತ್ರನಾಗಿ ಜನಿಸಿದರು. ನರಸಿಂಗ ಅವರು ಮ್ಯಾನ್ಮಾರ್ ಗೆ ತೆರಳಿ ಕೂಲಿ ಕೆಲಸ ಮಾಡುತ್ತಿದ್ದರು. 1943 ರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದು ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದರು ಮತ್ತು ಗೋಸಾಲ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದರು. ನಂತರ ಅವರು ಬ್ರಿಟಿಷ್ ಪಡೆಯ ವಿರುದ್ಧ ಹೋರಾಡಿದರು. ಗಾಥಾ ಬೆಟ್ಟದಲ್ಲಿ ಅವರ ವಿರುದ್ಧ ಹೋರಾಡುತ್ತಿದ್ದಾಗ ಅವರನ್ನು ಬಂಧಿಸಿದ ಬ್ರಿಟೀಷರು ಒಂಬತ್ತು ತಿಂಗಳ ಕಾಲ ರಂಗೂನ್ ಸೆಂಟ್ರಲ್ ಜೈಲಿನಲ್ಲಿ ಇರಿಸಿದ್ದರು. ಬಿಡುಗಡೆಯಾದ ನಂತರ ಮತ್ತೆ ಗ್ರಾಮಕ್ಕೆ ಬಂದು ಜನಸೇವೆಗೆ ತಮ್ಮ ಉಳಿದ ಜೀವನವನ್ನು ಮುಡಿಪಾಗಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!