ದಿನಭವಿಷ್ಯ | ಕೆಲವು ವಿಷಯಗಳು ಇಂದು ನಿಮ್ಮ ನೆಮ್ಮದಿ ಕಲಕಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕೆಲವು ವಿಷಯಗಳು ಇಂದು ನಿಮ್ಮ ನೆಮ್ಮದಿ ಕಲಕಬಹುದು. ಕೌಟುಂಬಿಕ ಹೊಂದಾಣಿಕೆಗೆ ಆದ್ಯತೆ ಕೊಡಿ. ನಿಮ್ಮ ನಿಲುವಿಗೆ ಅಂಟಿಕೊಳ್ಳದಿರಿ.

ವೃಷಭ
ನಿಮ್ಮ ಪ್ರಸಕ್ತ ಪರಿಸ್ಥಿತಿಯು ಗುರಿ ಸಾಧನೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಮೊದಲಿಗೆ ಪರಿಸ್ಥಿತಿ ಸರಿಮಾಡಿಕೊಳ್ಳಿ.

ಮಿಥುನ
ಯಶಸ್ಸು ನಿಮ್ಮ ತಲೆಗೇರದಂತೆ ನೋಡಿ ಕೊಳ್ಳಿ. ಅಹಂ, ನಿಷ್ಟುರ ನಡೆನುಡಿ ನಿಮಗೆ ಒಳಿತು ತರಲಾರದು. ಕೌಟುಂಬಿಕ ಸಮರಸತೆ ಕಾಯ್ದುಕೊಳ್ಳಿ.

ಕಟಕ
ಕೆಲಸದಲ್ಲಿ ಹೆಚ್ಚಿನ ಒತ್ತಡ. ಇದರಿಂದ ನಿಮ್ಮ ಹುರುಪು ಮಾಯ. ಸಾಲದ್ದಕ್ಕೆ ಕೆಲವರು ನಿಮ್ಮ ಮನಸ್ಸು ಹಾಳು ಮಾಡುವ ಮಾತನಾಡುತ್ತಾರೆ.

ಸಿಂಹ
ನಿಮ್ಮ ಸಮಸ್ಯೆಗೆ ಮೂಲಕಾರಣ ಏನು ಎಂಬುದರ ಅಂತರ್ಮಥನ ಮಾಡಿಕೊಳ್ಳಿ. ಬಳಿಕ ಪರಿಹಾರ ಹುಡುಕುವುದು ಸುಲಭ

ಕನ್ಯಾ
ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ಬಿಚ್ಚಿಡಲು ಹಿಂಜರಿಯದಿರಿ. ಅವರಿಂದ ಸೂಕ್ತ ಸ್ಪಂದನೆ ದೊರಕುವುದು. ಬೆಳಗಿನ ಬೇಸರವು ಸಂಜೆ ವೇಳೆಗೆ ಮಾಯ.

ತುಲಾ
ಕೋಪ ನಿಯಂತ್ರಿಸಿ. ಇಲ್ಲವಾದರೆ ಕೆಲವು ಅನಪೇಕ್ಷಿತ ಪ್ರಸಂಗ ಎದುರಿಸುವಿರಿ. ವಿವೇಚನೆಯಿಂದ ಯುಕ್ತ ಮಾರ್ಗ ಕಂಡುಕೊಳ್ಳಿ.

ವೃಶ್ಚಿಕ
ನಿಮ್ಮ ವೃತ್ತಿಗೆ ಇಂದು ಪೂರ್ಣ ಗಮನ ಕೊಡಿ. ಬೇರೆ ವಿಷಯಗಳತ್ತ ಮನಸ್ಸು ಹರಿಸಬೇಡಿ. ಸಹೋದ್ಯೋಗಿಗಳ ಸಹಕಾರ ದೊರಕುವುದು.

ಧನು
ಹೆಚ್ಚು ವಿವೇಚನೆಯಿಂದ ವರ್ತಿಸಿ. ಸಣ್ಣ ಸಮಸ್ಯೆಯಾದರೂ ಕಡೆಗಣಿಸಬೇಡಿ. ಏಕೆಂದರೆ ಅದುವೇ ದೊಡ್ಡ ತಲೆನೋವು ತರಬಹುದು.

ಮಕರ
ಖಾಸಗಿ ಸಂಬಂಧಗಳನ್ನು ಸರಿಯಾಗಿ ಕಾಪಾಡಿಕೊಳ್ಳಿ. ಸಣ್ಣ ವಿಷಯಕ್ಕೆ ಬಂಧುತ್ವ ಹಾಳು ಮಾಡಬೇಡಿ. ಆಪ್ತರಿಂದ ಸಂತೋಷದ ಸುದ್ದಿ ಕೇಳುವಿರಿ.

ಕುಂಭ
ಹೊಣೆಗಾರಿಕೆ ಕಳಚಿ ನಿರಾಳವಾಗುವ ಬಯಕೆ ನಿಮ್ಮದು. ಆದರೆ ಕೆಲವು ಹೊಣೆಗಳು ನಿಮ್ಮ ಬೆನ್ನು ಬಿಡುವುದಿಲ್ಲ. ಹಾಗಾಗಿ ಒತ್ತಡಗಳು ನಿಮ್ಮ ಮೇಲಿವೆ.

ಮೀನ
ಹಳೆಯ ಕೆಲವು ವಿಚಾರಗಳನ್ನು ಕೊಡವಿ ಹೊಸತನ ರೂಢಿಸಿಕೊಳ್ಳಲು ಯತ್ನಿಸಿರಿ. ಅದರಿಂದ ನಿಮಗೆ ಹಿತವಾಗಲಿದೆ. ಆರ್ಥಿಕ ಸಬಲತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!