ಹೊಸದಿಗಂತ ಡಿಜಿಟಲ್ ಡೆಸ್ಕ್
ರೈಲಿನಲ್ಲಿ ನಾಲ್ವರು ಮುಸ್ಲಿಂ ಸಮುದಾಯದ ವ್ಯಕ್ತಿಗಳು ನಮಾಜ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಖಡ್ಡಾ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ನಮಾಜ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಕ್ಟೋಬರ್ 20ರಂದು ಈ ಘಟನೆ ನಡೆದಿದೆ.
ಈ ವಿಡಿಯೋ ವನ್ನು ಉತ್ತರ ಪ್ರದೇಶದ ಮಾಜಿ ಶಾಸಕ ದೀಪ್ಲಾಲ್ ಭಾರ್ತಿ ಚಿತ್ರೀಕರಿಸಿದ್ದಾರೆ. ಸತ್ಯಾಗ್ರಹ ಎಕ್ಸ್‌ಪ್ರೆಸ್‌ನಲ್ಲಿ ನಾಲ್ವರು ನಮಾಜ್ ಮಾಡಿದ್ದು , ಇದರಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರಿಗೆ ತೊಂದರೆಯಾಗಿದೆ.
कुशीनगर में ट्रेन के स्लीपर कोच के गलियारे में हिंदुओं को शक्ति प्रदर्शन दिखाने के लिए नमाज पढ़ी गई। @RailwayNorthern pic.twitter.com/uezFAB1uLb
— Prashant Umrao (@ippatel) October 22, 2022
ನಮಾಜ್ ವೇಳೆ ಇತರ ಪ್ರಯಾಣಿಕರು ರೈಲಿನಲ್ಲಿ ಒಳಗೆ ಬರಲು ಮತ್ತು ಹೊರಗೆ ಹೋಗಲು ಸಾಧ್ಯವಾಗದೇ ತುಂಬಾ ತೊಂದರೆಯನ್ನು ಅನುಭವಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಮಾಜ್ ಮಾಡಬಹುದು? ಇದು ತಪ್ಪು ಎಂದು ದೀಪ್ಲಾಲ್ ಭಾರ್ತಿ ಹೇಳಿದ್ದಾರೆ.
ದೀಪಲಾಲ್ ಭಾರ್ತಿ ಅವರು ಭಾರತೀಯ ರೈಲ್ವೇ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.