ದೀಪಾವಳಿಗೆ ಜಿಯೋ ಭರ್ಜರಿ ಗಿಫ್ಟ್: ಸಾರ್ವಜನಿಕ ಸ್ಥಳಗಳಲ್ಲಿ 5ಜಿ ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಜಿಯೋ‌ ಸಂಸ್ಥೆ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭ ಮಾಡುತ್ತಿದ್ದು, ಇದೀಗ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭ ಮಾಡಿದೆ.

ಮೊದಲು ರಾಜಸ್ಥಾನದ ದೇಗುಲನಗರಿ ನಾಥ್​ದ್ವಾರಾದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ರೈಲು ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಕಡೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಜಿಯೋ ವೆಲ್‌ಕಮ್ ಆಫರ್ ಇತ್ತೀಚೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಾಣಸಿಯಲ್ಲಿ ಪ್ರಾರಂಭಿಸಲಾಗಿದೆ. ಇನ್ನಷ್ಟು ನಗರಗಳಲ್ಲಿ ವಿಸ್ತರಿಸಲು ಮತ್ತು ಟ್ರೂ5G-ಸಿದ್ಧ ಹ್ಯಾಂಡ್‌ಸೆಟ್‌ಗಳ ಲಭ್ಯತೆ ಹೆಚ್ಚಿಸಲು ಜಿಯೋ ತಂಡಗಳು ಹಗಲಿರುಳು ಕೆಲಸ ಮಾಡುತ್ತಿವೆ.

ಮಾನವೀಯತೆ ಸೇವೆಯು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರೀತಿಯ ಅಂಶಗಳಲ್ಲಿ ಒಂದಾಗಿದೆ. ಅದರ ಬೇರುಗಳು ನಮ್ಮ ಸಾಮಾಜಿಕ-ಧಾರ್ಮಿಕ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ ಎಂದು ರಿಲಯನ್ಸ್ ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಹೇಳಿದ್ದಾರೆ.

ಅದರ ಪ್ರಕಾರ, ಶ್ರೀನಾಥ್ ದೇಗುಲ ನಗರವಾದ ನಾಥ್​ದ್ವಾರದಲ್ಲಿ ನಾವು ಇಂದು 5ಜಿ ಆಧಾರಿತ ವೈಫೈ ಸೇವೆ ಆರಂಭಿಸಿದ್ದೇವೆ. ಇದರ ಜೊತೆಗೆ ಬೇರೆ ಬೇರೆ ಪ್ರದೇಶಗಳಿಗೆ ನಮ್ಮ ಸೇವೆ ವಿಸ್ತರವಾಗಲಿದೆ. ಚೆನ್ನೈ ನಗರದಲ್ಲಿ ಕೂಡ ಜಿಯೋ ಟ್ರೂ5ಜಿ ವೆಲ್​ಕಮ್ ಆಫರ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!