ಪ್ರಾಜೆಕ್ಟ್-ಕೆ ಸಿನಿಮಾದಲ್ಲಿ ಪ್ರಭಾಸ್ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು (ಅಕ್ಟೋಬರ್ 23) ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬ. ರಾಜ್ಯಾದ್ಯಂತ ರೆಬೆಲ್ ಸ್ಟಾರ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಯ ಅಂಗವಾಗಿ ಪ್ರಭಾಸ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬಿಲ್ಲಾ’ ರೀ ರಿಲೀಸ್ ಆಗುತ್ತಿದ್ದಂತೆ ಥಿಯೇಟರ್ ಗಳಲ್ಲಿ ಹಬ್ಬದ ವಾತಾವರಣವಿತ್ತು. ಅಲ್ಲದೇ ಪ್ರಭಾಸ್ ಅವರ ಪ್ರತಿಷ್ಠಿತ ಚಿತ್ರ ಪ್ರಾಜೆಕ್ಟ್-ಕೆಯಿಂದ ಹುಟ್ಟುಹಬ್ಬದ ಉಡುಗೊರೆ ಬಂದಿದೆ.

ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇಂದು ಈ ಚಿತ್ರದ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ, ಪ್ರಭಾಸ್ ತಮ್ಮ ಕೈ ಮೇಲೆ ವಿಶೇಷವಾಗಿ ವಿನ್ಯಾಸಗೊಳಿಸಿದ ರಕ್ಷಾಕವಚವನ್ನು ಧರಿಸಿದ್ದು, ಅದು ಮಾರ್ವೆಲ್ ಹೀರೋ ಐರನ್ ಮ್ಯಾನ್ ಧರಿಸಿರುವುದನ್ನು ಹೋಲುತ್ತದೆ.

‘ಹೀರೋಗಳು ಹುಟ್ಟುವುದಿಲ್ಲ, ಉದ್ಭವಿಸುತ್ತಾರೆ’ ಎಂಬ ಟೈಟಲ್‌ನೊಂದಿಗೆ ಪೋಸ್ಟರ್‌ ಬಿಡುಗಡೆಯಾಗಿದೆ. ಇದರೊಂದಿಗೆ ಈ ಚಿತ್ರದಲ್ಲಿ ಪ್ರಭಾಸ್ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇತ್ತೀಚೆಗೆ ಬಿಡುಗಡೆಯಾದ ಅಮಿತಾಭ್ ಬಚ್ಚನ್ ಅವರ ಪೋಸ್ಟರ್ ಕೂಡ ಈ ಸುದ್ದಿಯನ್ನು ಖಚಿತಪಡಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!