ಯುಕೆ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ ರಿಷಿ ಸುನಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಲಿಜ್‌ ಟ್ರಸ್‌ ರಾಜೀನಾಮೆಯಿಂದ ತೆರವುಗೊಂಡಿರುವ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ರಿಷಿ ಸುನಕ್ ಘೋಷಿಸಿದ್ದಾರೆ. ಆ ಮೂಲಕ ಯುಕೆ ಪ್ರಧಾನಿ ಯಾಗಲು ತಮ್ಮ ಎರಡನೇ ಪ್ರಯತ್ನವನ್ನು ಅವರು ಮಾಡಲಿದ್ದಾರೆ.

“ಯುನೈಟೆಡ್ ಕಿಂಗ್‌ಡಮ್ ಉತ್ತಮ ದೇಶವಾಗಿದೆ ಆದರೆ ನಾವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ” ಎಂದು ರಿಷಿ ಸುನಕ್ ತಮ್ಮ ಉಮೇದುವಾರಿಕೆಯನ್ನು ದೃಢೀಕರಿಸಿ ಟ್ವೀಟ್ ಮಾಡಿದ್ದಾರೆ.

“ನಮ್ಮ ಆರ್ಥಿಕತೆಯನ್ನು ಸರಿಪಡಿಸಲು, ನಮ್ಮ ಪಕ್ಷವನ್ನು ಒಗ್ಗೂಡಿಸಲು ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ” ಎಂದು ಅವರು ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

“ನಾವು ಈಗ ಎದುರಿಸುತ್ತಿರುವ ಸವಾಲುಗಳು ಇನ್ನೂ ದೊಡ್ಡದಾಗಿದೆ. ಆದರೆ ನಾವು ಸರಿಯಾದ ಆಯ್ಕೆ ಮಾಡಿದರೆ ಅವಕಾಶಗಳು ಅಸಾಧಾರಣವಾಗಿದೆ” ಎಂದು ರಿಷಿ ಸುನಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಾರ ಲಿಜ್ ಟ್ರಸ್ ಅವರ ರಾಜೀನಾಮೆಯು ನಾಯಕತ್ವದ ಸ್ಪರ್ಧೆಯನ್ನು ಪ್ರಚೋದಿಸಿತು ಏಕೆಂದರೆ ಅವರು ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಆಳಳಿದ ಪ್ರಧಾನ ಮಂತ್ರಿಯಾಗಿ ಅವರು ಸ್ಥಾನದಿಂದ ನಿರ್ಗಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!