ಹೊಸದಿಗಂತ ವರದಿ,ಅಂಕೋಲಾ:
ತಾಲೂಕಿನ ಹಲವಡೆ ಕೇತುಗ್ರಸ್ತ ಸೂರ್ಯ ಗ್ರಹಣ ಗೋಚರವಾಯಿತು.
ಬಸಾಕಲ್ ಗುಡ್ಡ, ಶೇಡಿಕುಳಿ ಕಡಲ ತೀರ, ನದಿಭಾಗ, ಹೊನ್ನೆಗುಡಿ ಕಡಲ ತೀರಗಳಲ್ಲಿ ಸೂರ್ಯ ಗ್ರಹಣವನ್ನು ಹಲವಾರು ಜನರು ವೀಕ್ಷಿಸಿದರು.
ಸಂಜೆ ಸೂರ್ಯಾಸ್ತದ ಸಂದರ್ಭದಲ್ಲಿ ಕಂಡು ಬಂದ ಖಗೋಳ ವಿಸ್ಮಯವನ್ನು ಅನೇಕರು ತಮ್ಮ ಮೊಬೈಲ್ ಪೋನ್ ಮೂಲಕ ಸೆರೆ ಹಿಡಿದರು.
ಬೆಳಂಬಾರ, ಬೆಲೇಕೇರಿ, ಹೊನ್ನೇಬೈಲ ಮೊದಲಾದ ಭಾಗಗಳಿಂದ ಕೆಲ ಕಾಲ ಗ್ರಹಣ ವೀಕ್ಷಣೆ ಸಾಧ್ಯವಾಯಿತು.
ಗ್ರಹಣ ಸ್ಪರ್ಶ ಕಾಲದಲ್ಲೇ ಸೂರ್ಯ ಕಡಲ ರಾಶಿಯಲ್ಲಿ ಮರೆಯಾದ ದೃಶ್ಯ ಮನ ಮೋಹಕವಾಗಿತ್ತು.