ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ತೆಲಂಗಾಣದಲ್ಲಿ ಪುನರಾರಂಭವಾಗಿದೆ. ದೀಪಾವಳಿ ಹಾಗೂ ಕಾಂಗ್ರೆಸ್ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಣಭ ಹಿನ್ನೆಲೆ ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದ ಯಾತ್ರೆ ಇಂದು ಪುನಃ ಶುರುವಾಗಿದೆ. ಇಂದು ಬೆಳಗ್ಗೆ ಮಕ್ತಲ್ ಬಳಿಯ ಸಬ್ ಸ್ಟೇಷನ್ ನಿಂದ ಈ ಯಾತ್ರೆ ಮತ್ತೆ ಆರಂಭವಾಗಿದೆ. ಈ ವೇಳೆ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.
ಇಂದು ಮಧ್ಯಾಹ್ನ ಜಾಕ್ಲೇರ್‌ನಲ್ಲಿ ಊಟದ ವಿರಾಮವನ್ನು ತೆಗೆದುಕೊಳ್ಳಲಾಗುತ್ತದೆ. ಬಳಿಕ ಸಂಜೆ 4 ಗಂಟೆಯಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ರಾಹುಲ್ ಗಾಂಧಿ ಇಂದು ರಾತ್ರಿ ಎಲೆಗಂಡ್ ನಲ್ಲಿ ತಂಗಲಿದ್ದಾರೆ. ಜೋಡೋ ಯಾತ್ರೆ ಇಂದು ಸುಮಾರು 28 ಕಿಲೋಮೀಟರ್‌ಗಳವರೆಗೆ ಮುಂದುವರೆದಿದೆ.
ಇದೇ ತಿಂಗಳ 23ರಂದು ಕರ್ನಾಟಕದ ರಾಯಚೂರಿನಿಂದ ತೆಲಂಗಾಣದ ಮಕ್ತಲ್ ಕ್ಷೇತ್ರಕ್ಕೆ ಯಾತ್ರೆ ಪ್ರವೇಶಿಸಿತ್ತು. ಗುಡೇಬಳ್ಳೂರಿನಲ್ಲಿ ರಾಹುಲ್ ಪಾದಯಾತ್ರೆಗೆ ವಿರಾಮ ನೀಡಿದರು.