ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅವರು ಸಿನಿಮಾಗಳಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಕೂಡಾ ಹೀರೋನೆ. ಮಹೇಶ್ ಬಾಬು ಫೌಂಡೇಶನ್ ಮೂಲಕ ಅನೇಕ ಬಡ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದಾರೆ. ಜೊತೆಗೆ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡು ಆ ಗ್ರಾಮಗಳಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಉಚಿತ ವೈದ್ಯಕೀಯ ಶಿಬಿರಗಳು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುತ್ತಿದ್ದಾರೆ.
ಮಹೇಶ್ ಬಾಬು ಪ್ರತಿಷ್ಠಾನದಿಂದ ಮತ್ತೊಂದು ಉತ್ತಮ ಕಾರ್ಯ ಆರಂಭಿಸಿದ್ದಾರೆ. ಮಹೇಶ್ ದತ್ತು ಪಡೆದಿರುವ ಬುರ್ರಿಪಾಲೆಂ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈಗಾಗಲೇ ಎಲ್ಲ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದೀಗ ಅಲ್ಲಿನ ಮಕ್ಕಳಿಗೆ ಕಂಪ್ಯೂಟರ್ ತರಗತಿ ಮತ್ತು ಡಿಜಿಟಲ್ ಕಲಿಕೆಗೆ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ.
ನಮ್ರತಾ ಶಿರೋಡ್ಕರ್ ಬುರ್ರಿಪಾಲೆಂ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್‌ಗಳನ್ನು ಸ್ಥಾಪಿಸುವ ಮತ್ತು ಡಿಜಿಟಲ್ ಕಲಿಕೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬುರ್ರಿಪಾಲೆಂ ಶಾಲೆಯು ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆಗಾಗಿ ಕಂಪ್ಯೂಟರ್‌ಗಳನ್ನು ನೀಡಲಾಗಿದೆ. ಒಂದು ಮತ್ತೊಂದು ಮಹತ್ವದ ದಿನ ಎಂದು ಪೋಸ್ಟ್ ಮಾಡಿದ್ದಾರೆ. ಮಹೇಶ್ ಬಾಬುಗೆ ಮತ್ತೊಮ್ಮೆ ಮೆಚ್ಚುಗೆಯ ಸುರಿಮಳೆ ಹರಿದುಬರುತ್ತಿದೆ.