ಕ್ಯಾಬ್ ಲೇಟಾಗಿದ್ದಕ್ಕೆ ಫ್ಲೈಟ್ ಮಿಸ್ ಆಯ್ತು, ಉಬರ್ ಸಂಸ್ಥೆಗೆ 20 ಸಾವಿರ ರೂ. ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ಮುಂಬೈ ಯುವತಿಯೊಬ್ಬರು ಕ್ಯಾಬ್‌ನಲ್ಲಿ ಏರ್‌ಪೋರ್ಟ್‌ಗೆ ಸರಿಯಾದ ಸಮಯಕ್ಕೆ ತಲುಪಲು ಆಗದೇ ಉಬರ್ ಮೇಲೆ ದೂರಿದ್ದಾರೆ.

ಉಬರ್ ಕ್ಯಾಬ್ ಚಾಲಕ ಬರುವುದು ತಡವಾಗಿದ್ದು ಯುವತಿಗೆ ವಿಮಾನ ಮಿಸ್ ಆಗಿದೆ. ಈ ಕಾರಣಕ್ಕೆ ಯುವತಿ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯ ಪಡೆದಿದ್ದಾರೆ. ತಡವಾಗಿ ಕ್ಯಾಬ್ ಸೇವೆ ನೀಡಿದ ಕಾರಣ ಆಕೆಯ ವಿಮಾನ ಮಿಸ್ ಆಗಿದ್ದಕ್ಕೆ 20 ಸಾವಿರ ರೂ. ಪರಿಹಾರ ಧನ ನೀಡಲು ಉಬರ್‌ಗೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

10 ಸಾವಿರ ರೂ ಮಾನಸಿಕ ಒತ್ತಡಕ್ಕೆ ಉಳಿ ಹಣ ಆಕೆ ಮಾಡಿದ ಖರ್ಚಿಗೆ ನೀಡಬೇಕು ಎಂದು ಸೂಚಿಸಲಾಗಿದೆ. 2018 ರಿಂದ ಕೇಸ್ ನಡೆಯುತ್ತಿದ್ದು, ಇದೀಗ ಜಯ ಸಿಕ್ಕಿದೆ. ಎಷ್ಟು ಬಾರಿ ಕರೆ ಮಾಡಿದರೂ ಕ್ಯಾಬ್ ಬುಕ್ ಮಾಡಿದ ಚಾಲಕ ಕರೆ ಸ್ವೀಕರಿಸಲಿಲ್ಲ. 15 ನಿಮಿಷ ತಡವಾಗಿ ಏರ್‌ಪೋರ್ಟ್ ತಲುಪಿದ್ದು, ಯುವತಿ ಕೇಸ್ ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!