ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಔರಂಗಾಬಾದ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕಟ್ಟಡವು ನಗರದ ಅತ್ಯಂತ ಕಿರಿದಾದ ಬೀದಿಗಳಲ್ಲಿ ಒಂದಾದ ಒಡಿಯಾ ಗಾಲಿ ಬಳಿ ಇದೆ ಎನ್ನಲಾಗಿದ್ದು ಸ್ಫೋಟದ ನಂತರ ಭಾರೀ ಪ್ರಮಾಣದ ಬೆಂಕಿ ಆವರಿಸಿಕೊಂಡಿದೆ. ಗಾಯಾಳುಗಳನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಬೆಂಕಿಯನ್ನು ನಂದಿಸುವಾಗ ಏಳು ಪೊಲೀಸ್ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದು ಮತ್ತು ಅವರನ್ನು ಸದರ್ ಆಸ್ಪತ್ರೆಗೆ ಸಾಗಿಸಲಾಯಿತು.
ಓಲ್ಡ್ ಜಿಟಿ ರಸ್ತೆಯಲ್ಲಿರುವ ಮರ್ಫಿ ರೇಡಿಯೋ ಬೀದಿಯಲ್ಲಿರುವ ನಿವಾಸದಲ್ಲಿ ಛತ್ ಪೂಜೆಯ ಸಿದ್ಧತೆಗಳ ನಡೆಸುತ್ತಿರುವ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಅವರ ಮನೆಯ ಮಹಿಳೆಯರು ಹಬ್ಬಕ್ಕಾಗಿ ಪ್ರಸಾದವನ್ನು ತಯಾರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಹಬ್ಬದ ನಿಮಿತ್ತ ನಿವಾಸಿಗಳು ಪ್ರಸಾದ (ನೈವೇದ್ಯ) ತಯಾರಿಸುತ್ತಿದ್ದಾಗ ಸಿಲಿಂಡರ್ ಸೋರಿಕೆಯಾಗಿದ್ದು, ಗ್ಯಾಸ್ ಪೈಪ್ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.