ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವಿಟರ್ನಲ್ಲಿ ಅಧಿಕೃತ ಖಾತೆ ಎಂದು ತಿಳಿಯಲು ಬ್ಲೂ ಟಿಕ್ ಅತ್ಯಾವಶ್ಯಕ. ಇನ್ನು ಮುಂದೆ ಅಧಿಕೃತ ಖಾತೆ ಎಂದು ತಿಳಿಸಲು ನೆರವಾಗುವ ಬ್ಲೂ ಟಿಕ್ ಪಡೆಯಲು ತಿಂಗಳಿಗೆ ಎಂಟು ಡಾಲರ್ ಪಾವತಿಸಬೇಕಿದೆ.
ಈ ಬಗ್ಗೆ ಟ್ವಿಟರ್ನ ನೂತನ ಮಾಲೀಕ ಎಲಾನ್ ಮಸ್ಕ್ ಮಾಹಿತಿ ನೀಡಿದ್ದಾರೆ. ಜನರು ಸ್ವತಃ ಶುಲ್ಕ ತೆರಲು ಆರಂಭಿಸುವುದರಿಂದ ಜಾಹೀರಾತುದಾರರ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ ಎನ್ನುವುಸು ಮಸ್ಕ್ ಅಭಿಪ್ರಾಯ
ಟ್ವಿಟರ್ನಲ್ಲಿ ಬ್ಲೂ ಟಿಕ್ ಪಡೆಯುವುದು ಒಂದು ರೀತಿ ಪ್ರತಿಷ್ಠೆಯ ವಿಷಯವಾಗಿದೆ. ಟ್ವಿಟರ್ನಲ್ಲಿ ಇನ್ನು ಯಾರಿಗೂ ಬೇಧಭಾವ ಇಲ್ಲ. ತಿಂಗಳ ಶುಲ್ಕ ಪಾವತಿಸುವ ಯಾರಾದರೂ ಬ್ಲೂಟಿಕ್ ಪಡೆಯಬಹುದು. ಯಾವುದೇ ಅಸಮಾನತೆ ಇಲ್ಲದೆ, ತಿಂಗಳಿಗೆ ಎಂಟು ಡಾಲರ್ ನೀಡುವ ಯಾರಾದರೂ ಬ್ಲೂ ಟಿಕ್ಗೆ ಅಪ್ಲೇ ಮಾಡಬಹುದು. ಆಯಾ ದೇಶಗಳ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಬ್ಲೂ ಟಿಕ್ ಪಡೆದ ಖಾತೆದಾರರಿಗೆ ಟ್ವಿಟರ್ ಆಲ್ಗರಿದಂದಲ್ಲಿ ಆದ್ಯತೆ ಸಿಗಲಿದೆ. ಈ ಖಾತೆಗಳಿಗೆ ಪ್ರತಿಕ್ರಿಯೆಗಳು, ಉಲ್ಲೇಖಗಳು ಮತ್ತು ಹುಡುಕಾಟಗಳಲ್ಲಿ ಆದ್ಯತೆ ಸಿಗುತ್ತದೆ. ಇವರು ದೀರ್ಘ ಅವಧಿಯ ಆಡಿಯೋ, ವಿಡಿಯೋ ಪೋಸ್ಟ್ ಮಾಡುವ ಅವಕಾಶವನ್ನೂ ಪಡೆಯಲಿದ್ದಾರೆ.
ಟ್ವಿಟರ್ನಲ್ಲಿ ಸಕ್ರಿಯವಾಗಿ ಕಂಟೆಂಟ್ ಕ್ರಿಯೇಟ್ ಮಾಡುವವರಿಗೂ ಹಣ ನೀಡುವ ವ್ಯವಸ್ಥೆ ಬಗ್ಗೆ ಮಸ್ಕ್ ಆಲೋಚಿಸುತ್ತಿದ್ದಾರೆ. ಬ್ಲೂ ಟಿಕ್ ಪಡೆಯುವ ಖಾತೆಗಳು ಹಲವು ಹಂತದಲ್ಲಿ ಪರಿಶೀಲನೆಗೆ ಒಳಗಾಗುತ್ತವೆ. ಈ ಸೇವೆಗೆ ಹಣ ನೀಡಬೇಕು ಎನ್ನುವುದನ್ನು ಟ್ವಿಟರ್ದಾರರು ಒಪ್ಪಲು ತಯಾರಿಲ್ಲ. ಸಮೀಕ್ಷೆ ಅನ್ವಯ ಶೇ.80ರಷ್ಟು ಮಂದಿ ಹಣ ನೀಡಲು ಒಪ್ಪಿಲ್ಲ, ಇನ್ನು ಶೇ.5ರಷ್ಟು ಮಂದಿ ಐದು ಡಾಲರ್ ನೀಡಬಹುದು ಎಂದಿದ್ದಾರೆ.
Twitter’s current lords & peasants system for who has or doesn’t have a blue checkmark is bullshit.
Power to the people! Blue for $8/month.
— Elon Musk (@elonmusk) November 1, 2022