ತಮಿಳುನಾಡಿನಲ್ಲಿ ಭಾರೀ ಮಳೆ: ಇಬ್ಬರ ಸಾವು, ಶಾಲಾಕಾಲೇಜಿಗೆ 7ದಿನ ರಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಿಳುನಾಡಿನ ಚೆನ್ನೈ ಮತ್ತು ಉಪನಗರಗಳಲ್ಲಿ ಭಾರೀ ಮಳೆ ಸಂಭವಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ನಗರ ಮತ್ತು ಹೊರವಲಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ ಒಬ್ಬ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಬುಧವಾರ ಬೆಳಿಗ್ಗೆ ಮಳೆ ಕಡಿಮೆಯಾದರೂ, ಭಾರತೀಯ ಹವಾಮಾನ ಇಲಾಖೆ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಕಾವೇರಿ ನದಿ ಮುಖಜ ಭೂಮಿಗೆ ಒಳಪಡುವ ಜಿಲ್ಲೆಗಳಾದ ರಾಮನಾಥಪುರ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿಯೂ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಏತನ್ಮಧ್ಯೆ, ಚೆನ್ನೈ, ತಿರುವಳ್ಳೂರು ಮತ್ತು ರಾಣಿಪೇಟ್‌ನಲ್ಲಿ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ಮಳೆ ರಜೆ ಘೋಷಿಸಿದೆ. ವೆಲ್ಲೂರು, ಕಾಂಜಿಪುರಂ, ವಿಲುಪುರಂ ಮತ್ತು ಚೆಂಗಲ್‌ಪಟ್ಟುಗಳಲ್ಲಿಯೂ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ನಿನ್ನೆ ಬೆಳಿಗ್ಗೆ 8.30 ರಿಂದ ಇಂದು ಮುಂಜಾನೆ 5.30 ರವರೆಗೆ ಚೆನ್ನೈನಲ್ಲಿ 126.1 ಮಿಮೀ ಮಳೆಯಾಗಿದೆ.

ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ನವೆಂಬರ್ 2 ರಂದು ಚೆನ್ನೈ ಭಾರೀ ಮಳೆಗೆ ಸಾಕ್ಷಿಯಾಗಲಿದೆ ಮತ್ತು ಪಕ್ಕದ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!