ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ಮುಂದೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗುವುದಾದರೆ ಅವುಗಳಿಗೆ ಅರ್ಧ ಟಿಕೆಟ್ ಪಡೆಯಬೇಕಿದೆ. ಈ ಹಿಂದೆ ಸಾಕು ಪ್ರಾಣಿ ಮರಿಯಾಗಿದ್ದರೂ ಫುಲ್ ಟಿಕೆಟ್ ಪಡೆಯಬೇಕಿತ್ತು. ಇದೀಗ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದ್ದು, ಟಿಕೆಟ್ ದರದ ಅರ್ಧದಷ್ಟು ಪಾವತಿಗೆ ಸಮ್ಮತಿ ದೊರಕಿದೆ.
ಕೆಎಸ್‌ಆರ್‌ಟಿಸಿ ಸುತ್ತೋಲೆ ಹೊರಡಿಸಿದ್ದು, ನಾನ್ ಎಸಿ ಬಸ್‌ಗಳಲ್ಲಿ ಪ್ರಾಣಿಗಳ ಜೊತೆ ಪ್ರಯಾಣಿಸಬಹುದಾಗಿದೆ. ರಾಜಹಂಸ, ಕರ್ನಾಟಕ ವೈಭವ ಹಾಗೂ ನಾನ್ ಎಸಿ ಸ್ಲೀಪರ್, ಎಸಿ ಬಸ್‌ಗಳಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಹೋಗುವಂತಿಲ್ಲ.
ಪರಿಷ್ಕೃತ ಸುತ್ತೋಲೆಯಲ್ಲಿ ಲಗೇಜ್ ಮಿತಿ ಬಗ್ಗೆಯೂ ಹೇಳಲಾಗಿದೆ. 30 ಕೆ.ಜಿವರೆಗಿನ ಲಗೇಜ್‌ನ್ನು ಬಸ್‌ನಲ್ಲಿ ಸಾಗಿಸಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಲಗೇಜ್ ಸಾಗಿಸಲು ಅನುಮತಿ ಇಲ್ಲ ಎನ್ನಲಾಗಿದೆ.