ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ನಾಪತ್ತೆಯಾಗಿ ಮೂರು ಕಳೆದರೂ ಇನ್ನೂ ಸುಳಿವು ಸಿಕ್ಕಿಲ್ಲ, ಇಡೀ ಕುಟುಂಬ ತೀವ್ರ ಆತಂಕ ಮೂಡಿಸಿದೆ.
ಇತ್ತ ಮನನೊಂದಿರುವ ರೇಣುಕಾಚಾರ್ಯ ಊಟ ಬಿಟ್ಟು ಕಣ್ಣೀರು ಹಾಕುತ್ತಿದ್ದಾರೆ. ತಂದೆಯ ಗೋಳಾಟ ನೋಡಿ ಮಗಳು ಸಂತೈಸಿ ಊಟ ಮಾಡಿಸಿದರು.
ಶಾಸಕರ ಸಹೋದರ ರಮೇಶ್ ಅವರ ಪುತ್ರ ಚಂದ್ರಶೇಖರ್ ಮೂರು ದಿನಗಳಿಂದ ಕಣ್ಮರೆಯಾಗಿದ್ದಾರೆ. ಇದರಿಂದ ರೇಣುಕಾಚಾರ್ಯ ಕುಟುಂಬ ಚಂದ್ರುಗಾಗಿ ಹುಡುಕಾಟ ನಡೆಸುುತ್ತಿದೆ. ಚಂದ್ರಶೇಖರ್ ಕಾರು ಮೈಸೂರು ಮಾರ್ಗವಾಗಿ ಬಂಡೀಪುರ ಅಭಯಾರಣ್ಯ ಕಡೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಮೈಸೂರಿನ ಕಡೆಗೆ ಧಾವಿಸಿದ್ದಾರೆ.
ಇತ್ತ ಪುತ್ರನಿಗಾಗಿ ಶಾಸಕ ರೇಣುಕಾಚಾರ್ಯ ಊಟ ಮಾಡದೇ ಕಣ್ಣೀರು ಹಾಕುತ್ತಿದ್ದಾರೆ. ಚಂದ್ರು ಎಲ್ಲಿದ್ದರೂ ಬೇಗ ವಾಪಸ್ ಮನೆಗೆ ಬಾ ಮಗನೇ ಎಂದು ಹೇಳಿ ಅಳುತ್ತಿದ್ದಾರೆ.