ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಖಾಸಗಿ ಬದುಕಲ್ಲೂ ವೃತ್ತಿ ಬದುಕಲ್ಲೂ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಪ್ರೀತಿಯ ವಿಷಯದಲ್ಲಿ ನಿಮ್ಮ ಇಷ್ಟಾರ್ಥ ಈಡೇರುವುದು.
ವೃಷಭ
ಭಿನ್ನಮತ ನಿವಾರಣೆ ಹಾಗೂ ಕೌಟುಂಬಿಕ ಸೌಹಾರ್ದ. ಹಣ ಗಳಿಕೆಯ ವಿಷಯದಲ್ಲಿ ನಿಮ್ಮ ಹೊಸ ಯೋಚನೆಗಳಿಗೆ ಸ್ಪಷ್ಟ ರೂಪು ನೀಡಿರಿ.
ಮಿಥುನ
ನಿಮ್ಮ ಕಾರ್ಯವು ಸಹೋದ್ಯೋಗಿಗಳಿಂದ ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಆವಶ್ಯಕತೆಗೆ ತಕ್ಕ ಆರ್ಥಿಕ ಬಲವೂ ಸಿಗುವುದು.
ಕಟಕ
ಇಂದು ಕೌಟುಂಬಿಕ ವಿಚಾರಗಳಿಗೆ ಹಣ ಖರ್ಚು ಮಾಡಬೇಕಾಗುವುದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ.
ಸಿಂಹ
ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದು. ಹಣಕಾಸಿನ ನೆರವು ಒದಗುವುದು. ಕೌಟುಂಬಿಕ ಸಮಸ್ಯೆಗೆ ಸಂಧಾನದ ಪರಿಹಾರ ಕಂಡುಕೊಳ್ಳಿ.
ಕನ್ಯಾ
ವೃತ್ತಿಗೆ ಸಂಬಂಧಿಸಿ ಕೆಲವು ಸವಾಲು ಎದುರಿಸುವಿರಿ. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಅದನ್ನು ಸಂಧಾನದಿಂದ ಬಗೆಹರಿಸಿಕೊಳ್ಳಿ.
ತುಲಾ
ಸವಾಲಿನ ದಿನ. ಒತ್ತಡವನ್ನು ಕಾಡುವುದು. ನಿಮ್ಮ ಪ್ರಗತಿಗೆ ಅಡ್ಡಿ ತೋರಿಬರುವುದು. ಗುರಿ ಸಾಧಿಸಲು ಸರಿಯಾದ ಯೋಜನೆ ಅವಶ್ಯ.
ವೃಶ್ಚಿಕ
ಹೊಸ ಯೋಜನೆಗೆ ಹಣ ಹೂಡುವ ಮುನ್ನ ಸರಿಯಾಗಿ ವಿಮರ್ಶಿಸಿ. ಆತುರದ ತೀರ್ಮಾನ ಸಲ್ಲದು. ಯಾರದೋ ಮಾತು ಕೇಳಿ ಸಂಬಂಧ ಕೆಡಿಸಿಕೊಳ್ಳಬೇಡಿ.
ಧನು
ಆರ್ಥಿಕ ಪರಿಸ್ಥಿತಿ ಸುಧಾರಣೆ. ಹಣದ ಬಿಕ್ಕಟ್ಟು ನಿವಾರಣೆ. ಪ್ರೀತಿ ನಿವೇದನೆಯಲ್ಲಿ ಆತುರ ತೋರದಿರಿ. ಅದು ನಿಮಗೆ ಪೂರಕ ಫಲ ನೀಡಲಾರದು.
ಮಕರ
ವ್ಯಕ್ತಿಯೊಬ್ಬರ ಕುರಿತು ಅತೀವ ಸಂವೇದನೆಯಿಂದ ವರ್ತಿಸುವಿರಿ. ಅವರ ನೋವು ನಲಿವುಗಳಿಗೆ ಮಿಡಿಯುವಿರಿ. ಖರ್ಚು ಹೆಚ್ಚಾಗಬಹುದು.
ಕುಂಭ
ಉದ್ಯೋಗದಲ್ಲಿ ಪ್ರಗತಿ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಒಟ್ಟಿನಲ್ಲಿ ನಿಮಗೆ ಹುರುಪು ತರುವ ದಿನ.
ಮೀನ
ವೃತ್ತಿ ಕ್ಷೇತ್ರದಲ್ಲಿ ಹೆಚ್ಚು ಹೊಣೆಗಾರಿಕೆ. ನಿಮ್ಮ ಸಕಲ ಪರಿಶ್ರಮ ಹಾಕಿ. ಸಂಜೆ ವೇಳೆಗೆ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.